ಸುದ್ದಿ

ಗುಜರಾತ್‌ನಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ ಪ್ರಕ್ರಿಯೆ ಆರಂಭ

Share It

ಗಾಂಧಿನಗರ: ಬಿಜೆಪಿ ಆಡಳಿತದ ಮತ್ತೊಂದು ರಾಜ್ಯದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ ಪ್ರಕ್ರಿಯೆ ಆರಂಭವಾಗಿದೆ. ಯುಸಿಸಿ ಕರಡು ಸಿದ್ದಪಡಿಸಲು ಗುಜರಾತ್ ಸರ್ಕಾರದಿಂದ, ನಿವೃತ್ತ ನ್ಯಾ| ರಂಜನಾ ದೇಸಾಯಿ ನೇತೃತ್ವದಲ್ಲಿ ರಚಿಸಲಾದ 5 ಸದಸ್ಯರ ಉನ್ನತ ಮಟ್ಟದ ಸಮಿತಿ ಯು ಜನಾಭಿಪ್ರಾಯ ಸಂಗ್ರಹಿಸಲು ಮುಂದಾಗಿದೆ. ಸಮಿತಿಯು ಮಂಗಳವಾರ ಮೊದಲ ಸಭೆ ನಡೆಸಿದ್ದು, ಈ ವೇಳೆ ಪ್ರತಿಕ್ರಿಯೆ ಪಡೆಯಲು www.uccgujarat.in ಎಂಬ ಪೋರ್ಟಲ್ ಬಿಡುಗಡೆಗೊಳಿಸಲಾಯಿತು.

ಬಳಿಕ ಮಾತನಾಡಿದ ನ್ಯಾ| ದೇಸಾಯಿ, ‘ರಾಜ್ಯಕ್ಕೆ ಸಂಹಿ ತೆಯ ಅಗತ್ಯವೇನು ಎಂಬುದನ್ನು ತೋರಿಸುವ ಕೆಲಸವನ್ನು ಸಮಿತಿಗೆ ವಹಿಸಲಾಗಿದ್ದು, ಸ್ತ್ರೀಯರಿಗೆ ಸಮಾನ ಹಕ್ಕು ಹಾಗೂ ಮಕ್ಕಳ ಕಾಳಜಿಯನ್ನು ಗಮನದಲ್ಲಿಟ್ಟುಕೊಂಡು ಕರಡು ಸಿದ್ದಪಡಿಸುತ್ತೇವೆ. ವಿವಾಹ-ವಿಚ್ಛೇದನದ ವಿಷಯದಲ್ಲಿ ಸಮಾನಹಕ್ಕಿರಬೇಕು. ಅವುಗಳನ್ನು ದಾಖಲಿಸಬೇಕು. ಪಿತ್ರಾರ್ಜಿತ ಕಾನೂನು ಮತ್ತು ಲಿವ್ ಇನ್ ಸಂಬಂಧಗಳ ಕರಡನ್ನು ಶೀಘ್ರದಲ್ಲೇ ಸಿದ್ದಪಡಿಸಲಾಗುವುದು’ ಎಂದರು.


Share It

You cannot copy content of this page