ಮಂಡ್ಯ: ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿದ
ವ್ಯಕ್ತಿಯೊಬ್ಬರಿಗೆ ನಿಗದಿತ ಸಮಯದೊಳಗೆ ಮಾಹಿತಿ ನೀಡದಿರುವ ಕಾರಣಕ್ಕೆ ರಾಜ್ಯ ಮಾಹಿತಿ ಹಕ್ಕು ಆಯೋಗ ಪಾಂಡವಪುರ ತಹಸೀಲ್ದಾರ್‌ಗೆ 50 ಸಾವಿರ ರು. ದಂಡ ವಿಧಿಸಿ ಆದೇಶಿಸಿದೆ.
ಮಂಡ್ಯ ಜಿಲ್ಲೆ, ನಮನಪಾಂಡವಪುರ ತಹಸೀಲ್ದಾರ್ ಸಂತೋಷ್ ದಂಡದ ಶಿಕ್ಷೆಗೆ ಒಳಗಾದವರು. ಶ್ರೀರಂಗಪಟ್ಟಣ ತಾಲೂಕಿನ ಎಂ.ಎಲ್.ಚಂದ್ರು ಎಂಬುವರು ಜಮೀನು ಸಕ್ರಮ ಅಕ್ರಮ ಕುರಿತು ಆರ್‌ಟಿಐಯಡಿ ಮಾಹಿತಿ ಕೋರಿದ್ದರು. 30 ದಿನಗಳ ಒಳಗಾಗಿ ಮಾಹಿತಿ ನೀಡಬೇಕಿತ್ತು. 240 ದಿನವಾದರೂ ಮಾಹಿತಿ ನೀಡದ್ದರಿಂದ ಅವರು ಆಯೋಗಕ್ಕೆ ದೂರು ಸಲ್ಲಿಸಿದ್ದರು.
ದೂರಿನ ವಿಚಾರಣೆ ನಡೆಸಿದ ರಾಜ್ಯ ಮಾಹಿತಿ ಹಕ್ಕು ಆಯೋಗ, ತಹಶಿಲ್ದಾರರ್ ಗೆ ದಂಡ ವಿಧಿಸಿದೆ. ಆಯೋಗದ ಆದೇಶವನ್ನು ದೆಹಲಿ ಹೈಕೋರ್ಟ್ ಕೂಡ ಎತ್ತಿ ಹಿಡಿದಿದ್ದು, ತಹಸೀಲ್ದಾರರ ಮೇಲ್ಮನವಿಯನ್ನು ತಿರಸ್ಕರಿಸಿದೆ.