ಹಾಸನ: ಶಿಕ್ಷಕಿಯೊಬ್ಬರ ವರ್ಗಾವಣೆ ಮಾಡಲು ₹40
ಸಾವಿರ ಲಂಚ ಪಡೆಯುತ್ತಿದ್ದ ಇಲ್ಲಿನ ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ (ಡಿಡಿಪಿಐ) ಎಚ್.ಕೆ. ಪಾಂಡು ಹಾಗೂ ಕಚೇರಿ ಅಧೀಕ್ಷಕ ಎ.ಎಸ್. ವೇಣುಗೋಪಾಲ್ ಶನಿವಾರ ತಮ್ಮ ಕಚೇರಿಯಲ್ಲೇ ಲೋಕಾಯುಕ್ತ ಬಲೆಗೆ ಸಿಕ್ಕಿಬಿದ್ದರು.
ಲಂಚ ಕೊಡುವಂತೆ ಡಿಡಿಪಿಐ ಅವರು ಅಧೀಕ್ಷಕರ ಮೂಲಕ ಕೇಳಿದ್ದಾರೆ ಎಂದು ಆರೋಪಿಸಿ ಶಿಕ್ಷಕಿಯ ಪತಿ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಲೋಕಾಯುಕ್ತ ಇನ್‌ಸ್ಪೆಕ್ಟರ್‌ಗಳಾದ ಬಾಲು ಹಾಗೂ ಶಿಲ್ಪಾ ನೇತೃತ್ವದ ತಂಡವು ಆರೋಪಿಗಳಿಬ್ಬರನ್ನೂ ಹಣದ ಸಮೇತ ಬಂಧಿಸಿದ್ದಾರೆ.