ಸುದ್ದಿ

ಕೇತಗಾನಹಳ್ಳಿ ಜಮೀನು ಸರ್ವೇ; ನಾನು ಸರ್ಕಾರದ ವಿರುದ್ಧ ಕಾನೂನು ಹೋರಾಟ ನಡೆಸುತ್ತೇನೆ: ಎಚ್.ಡಿ ಕುಮಾರಸ್ವಾಮಿ

Share It

“40 ವರ್ಷದ ಹಿಂದೆ ರೈತನಾಗಿ ಬದುಕಲು ನಾನು ಭೂಮಿ ಖರೀದಿಸಿದ್ದೇನೆ. ರಾಜ್ಯ ಸರ್ಕಾರ ಉದ್ದೇಶಪೂರ್ವಕವಾಗಿ ನನ್ನನ್ನು ಟಾರ್ಗೆಟ್ ಮಾಡಿದೆ”

ಬೆಂಗಳೂರು: ಕೇತಗಾನಹಳ್ಳಿ ಜಮೀನು ಸರ್ವೇ ಕುರಿತು ಮಂಗಳವಾರ ರಾಜ್ಯ ಸರ್ಕಾರದ ವಿರುದ್ಧ ಕಿಡಿ ಕಾರಿರುವ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ‘ನಾನು ಸರಕಾರದ ವಿರುದ್ಧ ಕಾನೂನು ಹೋರಾಟ ನಡೆಸುತ್ತೇನೆ. ನನ್ನ ಜೀವನದಲ್ಲಿ ನಾನು ಯಾವುದೇ ಅಪರಾಧ ಅಥವಾ ಅಕ್ರಮ ಎಸಗಿಲ್ಲ. ಭೂಮಿಯನ್ನು 40 ವರ್ಷಗಳ ಹಿಂದೆ ಕೃಷಿ ಮಾಡುವ ಉದ್ದೇಶಕ್ಕಾಗಿ ಖರೀದಿಸಲಾಗಿತ್ತು” ಎಂದು ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಎಚ್ಡಿಕೆ”ನಾನು ಎರಡು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದೇನೆ. ನಾನು ಯಾವುದೇ ಅಕ್ರಮ ಮಾಡಿಲ್ಲ. 40 ವರ್ಷಗಳ ಹಿಂದೆ ರೈತನಾಗಿ ಬದುಕಲು ನಾನು ಖರೀದಿಸಿದ ಭೂಮಿ ಅದು. ಸಾಮಾನ್ಯ ನಾಗರಿಕನಿಗೆ ಹದಿನೈದು ದಿನಗಳ ಮುಂಚಿತವಾಗಿ ನೋಟಿಸ್‌ ನೀಡಬೇಕು. ಆದರೆ ಕೇತಗಾನಹಳ್ಳಿಯಲ್ಲಿ ಅತಿಕ್ರಮಣಕ್ಕೆ ಸಂಬಂಧಿಸಿದಂತೆ ನನಗೆ ಇಲ್ಲಿಯವರೆಗೆ ಯಾವುದೇ ಮಾಹಿತಿ ಅಥವಾ ಸೂಚನೆ ನೀಡಿಲ್ಲ” ಎಂದು ಆರೋಪಿಸಿದರು.

“ಈ ಸರಕಾರದ ದಬ್ಬಾಳಿಕೆ ಯಾವ ಮಟ್ಟಕ್ಕೆ ಇದೆ ಎಂದು ಎಲ್ಲರಿಗೂ ಗೊತ್ತು. ಬೆಂಗಳೂರು ನಗರವನ್ನು ಲೂಟಿ ಮಾಡುತ್ತಿದೆ. ದೇಶದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಈ ಪ್ರಕರಣಕ್ಕೆ ಎಸ್‌ಐಟಿ ರಚನೆಯಾಗಿದೆ. ನಾನು ಕಾಂಗ್ರೆಸ್ ಸರಕಾರದ ಟಾರ್ಗೆಟ್ ಆಗಿದ್ದೇನೆ” ಎಂದು ಕಿಡಿ ಕಾರಿದರು.

ನಲವತ್ತು ವರ್ಷಗಳ ಹಿಂದೆ ಖರೀದಿಸಲಾದ ಭೂಮಿಯನ್ನು ನೂರು ಬಾರಿ ತನಿಖೆ ಮಾಡಲಾಗಿದೆ. ತನಿಖೆ 40 ವರ್ಷಗಳಿಂದ ನಡೆಯುತ್ತಿದೆ. ನನ್ನ ಪರಿಸ್ಥಿತಿ ಹೀಗಾದರೆ, ಸಾಮಾನ್ಯ ಜನರ ಪರಿಸ್ಥಿತಿ ಏನು?” ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.


Share It
<p>You cannot copy content of this page</p>