ಸುದ್ದಿ

ವೃತ್ತಿಪರ ತರಬೇತಿ ಶಿಷ್ಯವೇತನಕ್ಕೆ ಅರ್ಜಿ ಅಹ್ವಾನ

Share It

ಪರಿಶಿಷ್ಟ ಪಂಗಡದ 200 ಎಂಜಿನಿಯರಿಂಗ್ ಪದವೀಧರರಿಗೆ ತಿಂಗಳಿಗೆ ₹15ಸಾವಿರ ಶಿಷ್ಯವೇತನ

ಮೈಸೂರು: ಐಐಎಸ್‌ಸಿ, ಹಾಗೂ ಎನ್‌ಐಟಿ ಸಂಸ್ಥೆಗಳ ಮೂಲಕ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಹಾಗೂ ಮಷಿನ್ ಲರ್ನಿಂಗ್‌ ವಿಷಯದಲ್ಲಿ ವೃತ್ತಿಪರ ತರಬೇತಿ ಶಿಷ್ಯವೇತನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.

ಈ ತರಬೇತಿ ಕೋರ್ಸ್‌ಗಳಲ್ಲಿ ಭಾಗವಹಿಸುವ ಪರಿಶಿಷ್ಟ ಪಂಗಡದ 200 ಎಂಜಿನಿಯರಿಂಗ್ ಪದವೀಧರರಿಗೆ ತಿಂಗಳಿಗೆ ₹15ಸಾವಿರ ಶಿಷ್ಯವೇತನವನ್ನು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಕಲ್ಪಿಸಲಾಗುವುದು. ಸಮಗ್ರ ಬುಡಕಟ್ಟು ಅಭಿವೃದ್ಧಿ ಯೋಜನೆಯ ಯೋಜನಾ ಸಮನ್ವಯಾಧಿಕಾರಿ ಕಚೇರಿಯಲ್ಲಿ ಅರ್ಜಿ ಪಡೆದು ಏ.11ರೊಳಗೆ ಸಲ್ಲಿಸಬೇಕು.

ಮಾಹಿತಿಗೆ ಮೊ.ಸಂ. 97420 99989 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.


Share It
<p>You cannot copy content of this page</p>