ಮೈಸೂರು: ಕೊಲೆ ಪ್ರಕರಣ ಸಾಬೀತಾದ ಕಾರಣ ಅಪರಾಧಿಗಳಿಗೆ 7 ವರ್ಷ, 3 ತಿಂಗಳು ಜೈಲು ಶಿಕ್ಷೆ ವಿಧಿಸಿ 5ನೇ ಅಧಿಕ ಜಿಲ್ಲಾ ಮತ್ತು ಸೆಷನ್ ನ್ಯಾಯಾಲಯ ಆದೇಶಿಸಿದೆ.
ಜಮೀನು ವಿಚಾರವಾಗಿ ನಡೆದ ಗಲಾಟೆಯಲ್ಲಿ ಮೈಸೂರು ಜಿಲ್ಲೆ,ತಲಕಾಡು ಹೋಬಳಿ ಚಂದಹಳ್ಳಿ ಗ್ರಾಮದ ನಿವಾಸಿ ಕುಂಟೇಗೌಡ ಎಂಬಾತನನ್ನು ಅಪರಾಧಿಗಳಾದ ಶ್ರೀನಿವಾಸ್ ಹಾಗೂ ರೇವಮ್ಮ ಕತ್ತು ಹಿಸುಕಿ ಕೊಲೆ ಮಾಡಿದ್ದರು.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ತಿ.ನರಸೀಪುರ ಠಾಣೆ ಸರ್ಕಲ್ ಇನ್‌ಸ್ಪೆಕ್ಟರ್ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ನ್ಯಾಯಾಧೀಶರಾದ ಗುರುರಾಜ್ ಸೋಮಕ್ಕಳವರ್ ವಿಚಾರಣೆ ನಡೆಸಿ ಶಿಕ್ಷೆ ಪ್ರಕಟಿಸಿದ್ದಾರೆ. ಸರ್ಕಾರದ ಬಿ.ಇ.ಯೋಗೇಶ್ವರ್ ವಾದ ಮಂಡಿಸಿದರು.