ಸುದ್ದಿ

ಲೇಖಕ ವಿನೋದ್ ಕುಮಾರ್ ಶುಕ್ಲಾ ಅವರಿಗೆ 59ನೇ ಜ್ಞಾನಪೀಠ ಪ್ರಶಸ್ತಿ ಗೌರವ

Share It

ನವದೆಹಲಿ: ಹಿಂದಿಯ ಪ್ರಸಿದ್ದ ಬರಹಗಾರ,ಲೇಖಕ ವಿನೋದ್ ಕುಮಾ‌ರ್ ಶುಕ್ಲಾ ಅವರು 2024ನೇ ಜ್ಞಾನಪೀಠ ಪ್ರಶಸ್ತಿಗೆ ಭಾಜನರಾಗಿದ್ದಾರೆ. 88ರ ಹಿರಿಯ ಸಾಹಿತಿ ವಿನೋದ್ ಕುಮಾರ್ ಶುಕ್ಲಾ ಅವರು 59ನೇ ಜ್ಞಾನಪೀಠ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಛತ್ತೀಸ್‌ಗಢದಿಂದ ಭಾರತದ ಅತ್ಯುನ್ನತ ಸಾಹಿತ್ಯ ಗೌರವವನ್ನು ಪಡೆದ ಮೊದಲ ಲೇಖಕ ಎಂಬ ಕೀರ್ತಿಗೆ ವಿನೋದ್ ಪಾತ್ರರಾಗಿದ್ದಾರೆ. ಪ್ರಶಸ್ತಿಯು 11 ಲಕ್ಷ ರೂ. ನಗದು ಬಹುಮಾನ, ಕಂಚಿನ ಸರಸ್ವತಿ ಪ್ರತಿಮೆ ಮತ್ತು ಪ್ರಶಸ್ತಿ ಪತ್ರವನ್ನು ಹೊಂದಿರುವ ಈ ಪ್ರಶಸ್ತಿಯನ್ನು ಗೆದ್ದ 12ನೇ ಹಿಂದಿ ಲೇಖಕ ಇವರಾಗಿದ್ದಾರೆ.


Share It

You cannot copy content of this page