ಕಲಬುರಗಿ: ಮಾಹಿತಿ ಹಕ್ಕು ಆಯೋಗದ ಕಲಬುರಗಿ ಪೀಠದ ಆಯುಕ್ತ ರವೀಂದ್ರ ಗುರುನಾಥ ಧಾಕಪ್ಪ ಗುರುವಾರ 1 ಲಕ್ಷ ರೂ. ಲಂಚ ಪಡೆಯುವಾಗ ಲೋಕಾಯುಕ್ತರ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾರೆ.
ಮಾಹಿತಿ ಹಕ್ಕು ಕಾರ್ಯಕರ್ತ ಸಾ.ಶಿ.ಬೆನಕನಹಳ್ಳಿ ಅವರ ಹೆಸರನ್ನು ಬ್ಲಾಕ್ ಲಿಸ್ಟ್‌ನಿಂದ ತೆಗೆಸುವ ಮತ್ತು ಅವರ 107 ತಿರಸ್ಕೃತ ಅರ್ಜಿಗಳನ್ನು ಮರು ವಿಚಾರಣೆ ಮಾಡಲು ಮೂರು ಲಕ್ಷ ರೂ.ಗೆ ಲಂಚದ ಹಣಕ್ಕೆ ಆಯುಕ್ತ ಗುರುನಾಥ ಧಾಕಪ್ಪ ಬೇಡಿಕೆ ಇಟ್ಟಿದ್ದರು.
ಈ ಬಗ್ಗೆ ಸಾಮಾಜಿಕ ಕಾರ್ಯಕರ್ತ ಸಾ.ಶಿ.ಬೆನಕನಹಳ್ಳಿ ಅವರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಆಯುಕ್ತರ ಆಪ್ತ ಶ್ರೀಹರ್ಷ ಅವರ ಐಸಿಐಸಿಐ ಬ್ಯಾಂಕ್ ಖಾತೆಗೆ ಆರ್‌ಟಿಜಿಎಸ್ ಮೂಲಕ ಒಂದು ಲಕ್ಷ ರೂ.ಗಳನ್ನು ಟ್ರಾನ್ಸ್‌ಫರ್ ಮಾಡುವ ವೇಳೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಧಾಕಪ್ಪ ಅವರನ್ನು ಬಂಧಿಸಿದ್ದು ವಿಚಾರಣೆ ಕೈಗೊಂಡಿದ್ದಾರೆ.