ಬೆಂಗಳೂರು: ದಕ್ಷಿಣ ಅಮೇರಿಕಾದ ಗಯಾನದಲ್ಲಿ ಉದ್ಯೋಗದಲ್ಲಿದ್ದ ಕರ್ನಾಟಕದ ವ್ಯಕ್ತಿ ಹೃದಯಾಘಾತದಿಂದ ಸಾವನ್ನಪ್ಪಿದ್ದು, ಮೃತನ ಪಾರ್ಥಿವ ಶರೀರವನ್ನು ಭಾರತಕ್ಕೆ ತರಲು ರೂ.3.6 ಹಣಕಾಸಿನ ನೆರವನ್ನು ರಾಜ್ಯ ಸರ್ಕಾರ ನೀಡುತ್ತಿದೆ.
ಮೃತವ್ಯಕ್ತಿಯನ್ನು ಪಿ.ಬಿ.ಗಿರೀಶ್ ಎಂದು ಗುರ್ತಿಸಲಾಗಿದೆ. ಇವರು ಕೊಡಗಿನ ಮದೆನಾಡು ಗ್ರಾಮದ ನಿವಾಸಿಯಾಗಿದ್ದು, ದಕ್ಷಿಣ ಅಮೇರಿಕಾದ ಗಯಾನದ ಆಸ್ಪತ್ರೆಯೊಂದರಲ್ಲಿ ಸ್ಟಾಫ್ ನಸ್೯ ಆಗಿ ಪಿ.ಬಿ.ಗಿರೀಶ್ ಕೆಲಸ ಮಾಡುತ್ತಿದ್ದರು. ಅನಾರೋಗ್ಯಕ್ಕೆ ತುತ್ತಾಗಿ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿಧದರು. ಜುಲೈ 14 ರಂದು ಗಯಾನಾದ ಆಸ್ಪತ್ರೆಯೊಂದರಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಮೃತದೇಹವನ್ನು ಭಾರತಕ್ಕೆ ತರಲು ಸುಮಾರು 12 ಲಕ್ಷ ಖರ್ಚಾಗುತ್ತದೆ. ಈ ಸಂಬಂಧ ಮೃತ ಗಿರೀಶ್ ಅವರ ಕುಟುಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದು ಮೃತದೇಹವನ್ನು ಭಾರತಕ್ಕೆ ತರಲು ಆರ್ಥಿಕ ನೆರವು ನೀಡುವಂತೆ ಮನವಿ ಮಾಡಿದ್ದಾರೆ.