ಚಾಮರಾಜನಗರ: ಮೇರುನಟ ರಾಜ್‌ಕುಮಾರ್ ಸಹೋದರಿ, ಪುನೀತ್ ರಾಜ್‌ಕುಮಾರ್ ಅವರ ಮುದ್ದಿನ ಸೋದರತ್ತೆ ನಾಗಮ್ಮ ವಿಧಿವಶರಾಗಿದ್ದಾರೆ. ಆಗಸ್ಟ್ 1 ರಂದು ಬೆಳಗ್ಗೆ 11 ಗಂಟೆಗೆ ನಾಗಮ್ಮ ತಾಳವಾಡಿಯ ಗಾಜನೂರು ನಿವಾಸದಲ್ಲಿ ಚಿರನಿದ್ರೆಗೆ ಜಾರಿದ್ದಾರೆ. ಮೃತರಿಗೆ ಐವರು ಪುತ್ರರು, ಮೂವರು ಪುತ್ರಿಯರು ಇದ್ದಾರೆ.
ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ನಾಗಮ್ಮನವರು ಕುಟುಂಬದ ಸದಸ್ಯರೊಟ್ಟಿಗೆ ಗಾಜನೂರಿನ ತೋಟದ ಮನೆಯಲ್ಲಿ ಉಳಿದುಕೊಂಡಿದ್ದರು.ಮೃತರ ಅಂತ್ಯಕ್ರಿಯೆ ಶನಿವಾರ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಡಾ.ರಾಜ್ ಕುಮಾರ್ ಅವರ ಸಹೋದರಿ ನಾಗಮ್ಮ ಅವರಿಗೆ ಅಪ್ಪು ಎಂದರೇ ವಿಶೇಷ ಪ್ರೀತಿ ಇತ್ತು. ಪುನೀತ್ ರಾಜ್ ಕುಮಾರ್ ಮೃತಪಟ್ಟ ವಿಷಯವನ್ನು ನಾಗಮ್ಮ ಅವರಿಗೆ ಕೊನೆ ತನಕವೂ ತಿಳಿದಿರಲಿಲ್ಲ.