ಇಂದೋರ್: ಪತ್ರಕರ್ತನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಪ್ರಕರಣದಲ್ಲಿ ಇಂದೋರ್‌ನ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದ ಐವರು ವಕೀಲರಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಉಜ್ಜಯಿನಿಯ ವಕೀಲರಾದ ಧರ್ಮೇಂದ್ರ ಶರ್ಮ, ಶೈಲೇಂದ್ರ ಶರ್ಮ, ಭವೇಂದ್ರ ಶರ್ಮ ಹಾಗೂ ಪುರುಷೋತ್ತಮ್ ರಾಯ್ ಅವರಿಗೆ ಇಂದೋರ್‌ನ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀಕೃಷ್ಣಡಾಗ್ಲಿಯಾ ಅವರು 7 ವರ್ಷಗಳ ಕಠಿಣ ಜೈಲು ಶಿಕ್ಷೆ, ತಲಾ ₹10 ಸಾವಿರ ರೂ.ದಂಡ ವಿಧಿಸಿದೆ.
ಮತ್ತೊಬ್ಬ ಆರೋಪಿ ಸುರೇಂದ್ರ ಶರ್ಮಾ (90) ಅವರ ವಯಸ್ಸನ್ನು ಪರಿಗಣಿಸಿ ಮೂರು ವರ್ಷ ಸಾಮಾನ್ಯ ಜೈಲು ಶಿಕ್ಷೆ ವಿಧಿಸಿದೆ.