ಹಾವೇರಿ: ಬಸವಣ್ಣ ಓರ್ವ ಬ್ರಾಹ್ಮಣ. ಹಾಗಾಗಿ ನಾವು ಬ್ರಾಹ್ಮಣರಿಗೆ ಕೃತಜ್ಞರಾಗಿರಬೇಕು. ನಮ್ಮನ್ನು ಉದ್ದಾರ ಮಾಡೋಕೂ ಬಸವಣ್ಣನ ರೂಪದಲ್ಲಿ ಬ್ರಾಹ್ಮಣ ಬರಬೇಕಾಯ್ತು. ಇಲ್ಲದಿದ್ದರೆ ಶೂದ್ರರಾಗಿ ಇರಬೇಕಿತ್ತು. ಎಂದು ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಹೇಳಿದ್ದಾರೆ.
ಹಿಂದೂ ಅಂದರೆ ಸತ್ಯ ಸನಾತನ. ಬೇರೆ ಧರ್ಮಗಳು ಉತ್ಪತ್ತಿ ಆಗೋ ಮುನ್ನ ಇದ್ದದ್ದೇ ಹಿಂದೂ. ಭಾರತದಲ್ಲಿರುವ ಪ್ರತಿಯೊಬ್ಬ ಹಿಂದೂನೇ, ಮುಸ್ಲಿಂರೂ ಹಿಂದೂಗಳೇ, ಅಖಂಡ ಭಾರತ ಇದು. ಮುಸ್ಲಿಂ ಆಚರಣೆಗಳು ಯಾವ ರೀತಿ ಇದಾವೆ?. ಸನಾತನ ಧರ್ಮ ಹಿಂದೂವಿನ ಭಾಗವಾಗಿದೆ. ಆರ್ಯರೂ ಹಿಂದೂ ಭಾಗವೇ, ಹಿಂದೂಗೆ ಬಾರ್ಡರ್ ಇಲ್ಲ ಎಂದು ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ತಿಳಿಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ವಚನಾನಂದ ಶ್ರೀಗಳು, ಜಗತ್ತಿನ ಸಿದ್ಧಾಂತ ತತ್ವಗಳಿಗೆ ಮೂಲ ಹಿಂದೂ ಆಗಿದೆ. ಶ್ರೀಲಂಕಾ ಅಫ್ಘಾನಿಸ್ತಾನದ ಎಲ್ಲರೂ ಹಿಂದೂಗಳೇ. ದಯೆಯ ಬಗ್ಗೆಯೇ ಸಾಕ್ರೆಟಿಸ್, ತುಕಾರಾಮ್, ನಾಮದೇವ್, ಶಂಕರರು, ಬಸವಣ್ಣ ಎಲ್ಲರೂ ಇದನ್ನ ಹೇಳಿದರು. ಆಚರಣೆ ಮನೇಲಿ ಇರಬೇಕು. ದೇಶ ಸಮುದಾಯ ಅಂತ ಬಂದಾಗ ನಾವೆಲ್ಲಾ ಹಿಂದೂಗಳು ಎಂದು ಸ್ವಾಮೀಜಿ ಹೇಳಿದ್ದಾರೆ.