ಸುದ್ದಿ

ಪತಿಯ ವಯಸ್ಸಾದ ತಂದೆ-ತಾಯಿಯನ್ನು ಪತ್ನಿ ಆರೈಕೆ ಮಾಡದಿರುವುದು ಕ್ರೌರ್ಯವಲ್ಲ: ಹೈಕೋರ್ಟ್

Share It

ಲಖನೌ: ಪತಿಯ ವಯಸ್ಸಾದ ತಂದೆ-ತಾಯಿಯ ಆರೈಕೆ ಮಾಡುವಲ್ಲಿ ಪತ್ನಿ ವಿಫಲಳಾಗಿದ್ದಾಳೆ ಎಂದ ಮಾತ್ರಕ್ಕೆ ಅದನ್ನು ಕ್ರೌರ್ಯ ಎಂದು ಪರಿಗಣಿಸಲಾಗದು ಎಂದು ಅಲಹಾಬಾದ್ ಹೈಕೋರ್ಟ್ ಹೇಳಿದೆ.

ಪತ್ನಿ ತನ್ನ ವಯಸ್ಸಾದ ತಂದೆ, ತಾಯಿಯನ್ನು ಸರಿಯಾಗಿ ಆರೈಕೆ ಮಾಡುತ್ತಿಲ್ಲ ಎಂಬ ಕಾರಣ ನೀಡಿ ವಿಚ್ಛೇದನ ನೀಡುವಂತೆ ಕೋರಿದ್ದ ತನ್ನ ಮನವಿಯನ್ನು ತಿರಸ್ಕರಿಸಿ ಕೆಳ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಪತಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.

ನ್ಯಾಯಮೂರ್ತಿಗಳಾದ ಸೌಮಿತ್ರ ದಯಾಲ್ ಸಿಂಗ್ ಹಾಗೂ ಡಿ.ರಮೇಶ್ ಅವರಿದ್ದ ವಿಭಾಗೀಯ ನ್ಯಾಯಪೀಠ ಅರ್ಜಿಯ ವಿಚಾರಣೆ ನಡೆಸಿತು.

ವಿವಾಹದ ನಂತರ ಸೊಸೆ ಅತ್ತೆ-ಮಾವನ ಮನೆಯಿಂದ ದೂರ ಇರಲು ನಿರ್ಧರಿಸಿದ ಸಂದರ್ಭದಲ್ಲಿ,ಪತಿಯ ವಯಸ್ಸಾದ ತಂದೆ-ತಾಯಿಯ ಆರೈಕೆಯನ್ನು ಪತ್ನಿ ಸರಿಯಾಗಿ ಮಾಡುವಲ್ಲಿ ವಿಫಲಳಾಗಿದ್ದಾಳೆ ಎಂಬುದು ಕ್ರೌರ್ಯ ಎನಿಸುವುದಿಲ್ಲ’ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ. ಅಲ್ಲದೆ ಕೌಟುಂಬಿಕ ಕ್ರೌರ್ಯವು ವಿಚ್ಛೇದನ ನೀಡುವುದಕ್ಕೆ ಕಾರಣವೆನಿಸಿದರೂ, ಕ್ರೌರ್ಯವನ್ನು ನಿರ್ದಿಷ್ಟ ಚೌಕಟ್ಟಿನಡಿ ವ್ಯಾಖ್ಯಾನ ಮಾಡಲಾಗದು ಎಂದು ನ್ಯಾಯಪೀಠ ಹೇಳಿದೆ.

ಉದ್ಯೋಗ ನಿಮಿತ್ತ ನಾನು ದೂರದ ಊರಿನಲ್ಲಿದ್ದೆ. ಹೀಗಾಗಿ, ವಯಸ್ಸಾದ ನನ್ನ ತಂದೆ-ತಾಯಿಯನ್ನು ಆರೈಕೆ ಮಾಡುವ ಜವಾಬ್ದಾರಿಯನ್ನು ಪತ್ನಿಗೆ ವಹಿಸಿದ್ದೆ. ಆದರೆ, ಪತ್ನಿಯು ನನ್ನ ತಂದೆ-ತಾಯಿಯನ್ನು ಸರಿಯಾಗಿ ನೋಡಿಕೊಂಡಿಲ್ಲ ಹಾಗೂ ನನ್ನ ತಂದೆ-ತಾಯಿಯಿಂದ ಪತ್ನಿ ಪ್ರತ್ಯೇಕವಾಗಿ ವಾಸಿಸುತ್ತಿದ್ದಳು. ಇದು ಕ್ರೌರ್ಯ’ ಎಂದು ಪತಿ ಅರ್ಜಿಯಲ್ಲಿ ಹೇಳಿದ್ದರು.ಆದರೆ ದೂರಿನಲ್ಲಿ ತನ್ನ ತಂದೆ-ತಾಯಿಗೆ ಯಾವ ಮಟ್ಟದ ಆರೈಕೆ ಅಗತ್ಯವಿತ್ತು ಎಂಬುದನ್ನು ಹೇಳಿಲ್ಲ. ಅಲ್ಲದೇ, ತನ್ನ ಪತ್ನಿ ಕ್ರೂರವಾಗಿ ವರ್ತಿಸಿದ್ದಾಳೆ ಎಂಬ ಆರೋಪವನ್ನು ಸಾಬೀತುಪಡಿಸಿಲ್ಲ ಎಂದೂ ನ್ಯಾಯಪೀಠ ತೀರ್ಪಿನಲ್ಲಿ ಹೇಳಿದೆ.


Share It

You cannot copy content of this page