ಸುದ್ದಿ

ಅವ್ಯವಹಾರ: ಉದ್ಯಮಿ ಅನಿಲ್ ಅಂಬಾನಿಗೆ 5 ವರ್ಷ ಷೇರುಮಾರುಕಟ್ಟೆ ನಿಷೇಧಿಸಿದ ಸೆಬಿ

Share It

ಮುಂಬೈ: ಮಾರುಕಟ್ಟೆ ನಿಯಂತ್ರಕ ಸೆಬಿ (SEBI) ನಿಧಿ ಅವ್ಯವಹಾರ ಆರೋಪ: ಅನಿಲ್ ಅಂಬಾನಿ ಅವರನ್ನು ಷೇರು ಮಾರುಕಟ್ಟೆಯಿಂದ 5 ವರ್ಷಗಳ ಕಾಲ ನಿಷೇಧ ಅಂಬಾನಿಗೆ ಸಂಬಂಧಿತ 2 ಘಟಕಗಳನ್ನು ಕೂಡ ಮಾರುಕಟ್ಟೆಯಿಂದ ಐದು ವರ್ಷಗಳ ಕಾಲ ನಿಷೇಧಿಸಿದೆ.

ಅಂಬಾನಿ ಮೇಲೆ ರೂ.25 ಕೋಟಿ ದಂಡ ವಿಧಿಸಲಾಗಿದ್ದರೆ, ಅವರ ರಿಲಯನ್ಸ್ ಹೋಮ್ ಫೈನಾನ್ಸ್ ಆರು ತಿಂಗಳ ನಿಷೇಧ ಮತ್ತು 6 ಲಕ್ಷ ರೂಪಾಯಿ ದಂಡವನ್ನು ಎದುರಿಸುತ್ತಿದೆ. ಪಟ್ಟಿ ಮಾಡಲಾಗಿರುವ ಯಾವುದೇ ಕಂಪನಿಯಲ್ಲಿ ಕೂಡ ನಿರ್ದೇಶಕರಾಗುವಂತಿಲ್ಲ ಎಂದು ಕೂಡ ನಿಷೇಧಿಸಲಾಗಿದೆ.

ಸೆಬಿ (SEBI)ಯ ಕ್ರಮದ ನಂತರ ಅನಿಲ್ ಅಂಬಾನಿ ಅವರ ಕಂಪನಿ ರಿಲಯನ್ಸ್ ಇನ್‌ಫ್ರಾ, ರಿಲಯನ್ಸ್ ಹೋಂ ಫೈನಾನ್ಸ್ ಮತ್ತು ರಿಲಯನ್ಸ್ ಪವರ್ ಷೇರುಗಳು ಕುಸಿತ ಕಂಡಿವೆ.


Share It

You cannot copy content of this page