ಸುದ್ದಿ

ಫ್ರೆಂಚ್ ಫ್ರೈಸ್ ತಿನ್ನಬೇಡ ಎಂದಿದ್ದಕ್ಕೆ ಪತಿಯ ವಿರುದ್ಧ ಪತ್ನಿಯಿಂದ ಕ್ರೌಯದ ಕೇಸ್ ; ಪತಿಯ ಪರವಾಗಿ ನಿಂತು ತನಿಖೆಗೆ ತಡೆ ನೀಡಿದ ಹೈಕೋರ್ಟ್

Share It

ಬೆಂಗಳೂರು: ಫ್ರೆಂಚ್ ಫ್ರೈಸ್ ತಿನ್ನಲು ಅವಕಾಶ ನೀಡದ್ದಕ್ಕೆ ಪತ್ನಿಯಿಂದ ಕ್ರೌರ್ಯದ ಕೇಸ್ ಎದುರಿಸುತ್ತಿದ್ದ ಪತಿಯ ರಕ್ಷಣೆಗೆ ಹೈಕೋಟ್೯ ನಿಂತು ತನಿಖೆಗೆ ತಡೆ ನೀಡಿ ಆದೇಶಿಸಿದೆ.

ಬೆಂಗಳೂರಿನ ನಿವಾಸಿ ಸಧ್ಯ ಅಮೇರಿಕಾದಲ್ಲಿ ಉದ್ಯೋಗಿಯಾಗಿರುವ ಪತಿ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಎಫ್ಐಆರ್ ತನಿಖೆಗೆ ತಡೆ ನೀಡಿ ಆದೇಶಿಸಿದೆ.

ನನ್ನ ಪತ್ನಿ ಸ್ವಭಾವತಃ ಮುಂಗೋಪಿ, ಅತ್ಯಂತ ಕಠಿಣ ಸ್ವಭಾವದವಳು ಮದುವೆಯಾದ ನಂತರ ಅಮೇರಿಕಾದಲ್ಲಿ ನೆಲೆಸಿದ್ದೇವು. ನಮಗೀಗ ಮಕ್ಕಳೂ ಇವೆ. ನನಗೆ ಸರಿಯಾಗಿ ಅಡುಗೆ ಮಾಡಿ ಬಡಿಸುವುದಿಲ್ಲ. ಕೇಳಿದರೆ ನಾನೇನು ಅಡುಗೆ ಮಾಡಲು ನನ್ನನ್ನು ಮದುವೆಯಾಗಿದ್ದೀಯಾ ಎಂದು ಗಲಾಟೆ ಮಾಡುತ್ತಾಳೆ. ಸದಾ ಫೇಸ್ಬುಕ್, ರೀಲ್ಸ್ ಮಾಡುವುದರಲ್ಲೆ ಮುಳುಗಿರುತ್ತಾಳೆ. ನನ್ನ ಮಾತನ್ನು ಗೌರವಿಸುವುದಿಲ್ಲ, ಪತ್ನಿಗೆ ಮಾನಸಿಕ ಸ್ಥಿಮಿತ ಇಲ್ಲ.

ವಿನಾಕಾರಣ ನನ್ನ ಮತ್ತು ನನ್ನ ಪೋಷಕರ ವಿರುದ್ಧ ಐಪಿಸಿ 498 ಎ ಅಡಿಯಲ್ಲಿ ದೂರು ದಾಖಲಿಸಿದ್ದಾರೆ. ನಾನು ಅಮೇರಿಕಾದಲ್ಲಿ ಉದ್ಯೋಗಿಯಾಗಿದ್ದೇನೆ. ಪತ್ನಿಯ ದೂರಿನಿಂದ ವಿಚಾರಣೆ ಎದುರಿಸಬೇಕಾಗಿರುವುದರಿಂದ ನಾನು ಅಮೇರಿಕಾಗೆ ತೆರಳಲು ಸಾಧ್ಯವಾಗುತ್ತಿಲ್ಲ ಎಂದು ಕೋಟ್೯ಗೆ ಸಲ್ಲಿಸಿರುವ ಅರ್ಜಿಯಲ್ಲಿ ಉಲ್ಲೇಖಿಸಿದ್ದು ತನ್ನ ವಿರುದ್ಧದ ತನಿಖೆಗೆ ತಡೆ ನೀಡಬೇಕೆಂದು ಕೋರಿದ್ದರು.

ಅರ್ಜಿಯಲ್ಲಿ ಪತಿ,ಪತ್ನಿಯ ಸಣ್ಣ ಸಣ್ಣ ಸಂಗತಿಗಳನ್ನೂ ಪಟ್ಟಿ ಮಾಡಿ ಆಕ್ಷೇಪಿಸಿರುವುದು ಮತ್ತು ವಿಚಾರಣೆ ವೇಳೆ ‘ ಫ್ರೆಂಚ್ ಫ್ರೈಸ್ ತಿನ್ನಲು ಬಿಡುತ್ತಿಲ್ಲ ಎಂಬ ಆಕ್ಷೇಪಣೆಯನ್ನು ಆಲಿಸಿದ ನ್ಯಾಯಪೀಠ ಇದೊಂದು ಕ್ಷುಲ್ಲಕ ವಿಚಾರ ಎಂಬುದನ್ನು ಮೌಖಿಕವಾಗಿ ಹೇಳಿ ಪತಿ ವಿರುದ್ಧದ ಎಫ್ಐಆರ್ ಗೆ ತಡೆ ಆದೇಶ ನೀಡಿದೆ.


Share It

You cannot copy content of this page