ಮಂಗಳೂರು: ಚೆಕ್ ಬೌನ್ಸ್ ಪ್ರಕರಣದಲ್ಲಿ ಸಿರಿಯಲ್ ಹಾಗೂ ಸಿನಿಮಾ ನಟಿ ಪದ್ಮಜಾ ರಾವ್ ಅವರಿಗೆ 8ನೇ ಜೆಎಂಎಫ್ ಸಿ ನ್ಯಾಯಾಲಯ ₹ 40.20 ಲಕ್ಷ ದಂಡ ಸಹಿತ 3 ತಿಂಗಳು ಕಾರಾಗೃಹ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ನಟಿ ಪದ್ಮಜಾ ರಾವ್ ಅವರು ₹ 40 ಲಕ್ಷ ಸಾಲ ಪಡೆದಿದ್ದರು. ಈ ಸಾಲಕ್ಕೆ ಭದ್ರತೆಯಾಗಿ 2020ರ ಜೂನ್ 17 ರಂದು ಬನಶಂಕರಿ ಶಾಖೆಯಲ್ಲಿರುವ ಐಸಿಐಸಿಐ ಬ್ಯಾಂಕ್ ಖಾತೆಯ ಚೆಕ್ ನೀಡಿದ್ದರು. ಈ ಚೆಕ್ ನ್ನು ಸಾಲ ಕೊಟ್ಟವರು ಬ್ಯಾಂಕ್ ಗೆ ಹಾಕಿದಾಗ ಪದ್ಮಜಾ ರಾವ್ ಖಾತೆಯಲ್ಲಿ ಅಷ್ಟೊಂದು ಹಣ ಇರಲಿಲ್ಲ.
15 ದಿನಗಳ ಒಳಗೆ ಸಾಲದ ಹಣ ಪಾವತಿಸುವಂತೆ ಪದ್ಮಜಾರಾವ್ ಅವರಿಗೆ ನೋಟಿಸ್ ನೀಡಿದರೂ ಸಾಲದ ಹಣ ವಾಪಸ್ ನೀಡಿರಲಿಲ್ಲ.ಹಾಗಾಗಿ ಸಾಲ ಕೊಟ್ಟಿದ್ದ ಮಂಗಳೂರು ಮೇರಿಹಿಲ್ ನಿವಾಸಿ ವೀರೇಂದ್ರ ಶೆಟ್ಟಿ ಕೋಟ್೯ ಮೆಟ್ಟಿಲೇರಿದ್ದರು.