ಸುದ್ದಿ

ಕೇರಳದಲ್ಲಿ ದೇಶದ ಮೊದಲ 24/7 ಆನ್‌ಲೈನ್ ನ್ಯಾಯಾಲಯ

Share It

ತಿರುವನಂತಪುರಂ: ದಿನದ 24 ಗಂಟೆಯೂ, ವಾರದ ಎಲ್ಲಾ ದಿನಗಳೂ ಕಾರ್ಯನಿರ್ವಹಿಸುವ ದೇಶದ ಮೊದಲ ಆನ್‌ಲೈನ್ ನ್ಯಾಯಾಲಯ ಕೇರಳದ ಕೊಲ್ಲಂನಲ್ಲಿ ಚಾಲನೆಗೊಳ್ಳಲಿದೆ.

ದೂರುದಾರರು ಕೋರ್ಟ್ ಮೆಟ್ಟಿಲು ಹತ್ತದೆಯೇ, ತಮ್ಮ ಅರ್ಜಿಗಳನ್ನು ಆನ್‌ಲೈನ್ ದೂರು ಸಲ್ಲಿಕೆಯಿಂದ ಹಿಡಿದು, ವಿಚಾರಣೆವರೆಗೆ ಎಲ್ಲವೂ ಡಿಜಿಟಲ್ ಕೋರ್ಟ್‌ ರೂಮ್‌ನಲ್ಲೇ ಆನ್‍ಲೈನ್ ಮೂಲಕವೇ ಸಲ್ಲಿಸಬಹುದು, ಆನ್‌ಲೈನ್ ಮೂಲಕವೇ ಅಗತ್ಯ ಶುಲ್ಕಗಳನ್ನು ಪಾವತಿಸಬಹುದು. ಅಲ್ಲದೆ, ಆನ್‌ಲೈನ್ ಮೂಲಕವೇ ವಿಚಾರಣೆಗೂ ಹಾಜರಾಗಬಹುದು.

ಆರಂಭಿಕವಾಗಿ ಚೆಕ್‌ಬೌನ್ಸ್‌ಗೆ ಸಂಬಂಧಿಸಿದ ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗುವುದು. ಮುಂದಿನ ದಿನಗಳಲ್ಲಿ ಇತರೆ ಪ್ರಕರಣಗಳ ವಿಚಾರಣೆಯೂ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಕೀಲರು ಸಾಕ್ಷ್ಯಗಳು, ಸಾಕ್ಷಿಗಳನ್ನು ಆನ್‌ಲೈನ್ ಮೂಲಕವೇ ನ್ಯಾಯಾಧೀಶರ ಮುಂದೆ ಹಾಜರುಪಡಿಸಬಹುದಾಗಿದೆ. ಜಾಮೀನು ಅರ್ಜಿಗಳನ್ನೂ ಆನ್‌ಲೈನ್ ಮೂಲಕವೇ ಸಲ್ಲಿಸಲು ಅವಕಾಶವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ


Share It

You cannot copy content of this page