ಸುದ್ದಿ

ಗಂಟಲಲ್ಲಿ ಬಲೂನ್ ಸಿಲುಕಿ 13 ವರ್ಷದ ಬಾಲಕ ಸಾವು

Share It

ಹಳಿಯಾಳ : ಗಂಟಲಲ್ಲಿ ಬಲೂನ್ ಸಿಲುಕಿ ಬಾಲಕನೊಬ್ಬ ಮೃತಪಟ್ಟಿರುವ ದಾರುಣ ಘಟನೆ ಉತ್ತರ ಕನ್ನಡ ಜಿಲ್ಲೆ, ಹಳಿಯಾಳ ತಾಲ್ಲೂಕಿನ ಜೋಗನಕೊಪ್ಪ ಗ್ರಾಮದಲ್ಲಿ ಭಾನುವಾರ ರಾತ್ರಿ ದಾರುಣ ಘಟನೆ ನಡೆದಿದೆ.

ಶೀಲಾ ಹಾಲ್ಕುರಿಕೆ ಸಾಮಾಜಿಕ ಕಾರ್ಯಕರ್ತೆ & ರಂಗಭೂಮಿ ಕಲಾವಿದೆ ಮಗನಾದ ಬಾಲಕ ನವೀನ್ ನಾರಾಯಣ ಬೆಳಗಾಂವಕರ (13) ಮೃತಪಟ್ಟ ದುರ್ದೈವಿ.

‘ಬಾಲಕ ಬಲೂನ್ ಊದುವ ವೇಳೆ ಗಂಟಲಿಗೆ ಸಿಲುಕಿ, ಉಸಿರುಗಟ್ಟಿತ್ತು. ಕೂಡಲೆ ತಾಲ್ಲೂಕು ಆಸ್ಪತ್ರೆಗೆ ಕರೆದೊಯ್ದಿದ್ದೆವು. ಬಾಲಕ ಮೃತಪಟ್ಟಿದ್ದಾಗಿ ವೈದ್ಯರು ಘೋಷಿಸಿದರು’ ಎಂದು ಮೃತನ ಕುಟುಂಬ ಸದಸ್ಯರೊಬ್ಬರು ತಿಳಿಸಿದರು.ಘಟನೆ ಕುರಿತು ಹಳಿಯಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Share It

You cannot copy content of this page