ಸುದ್ದಿ

ಪಿಡಿಒ ನೇಮಕಾತಿ ಪರೀಕ್ಷೆ ಹಿನ್ನೆಲೆ; ಭಾನುವಾರ ಮೆಟ್ರೋ ಸೇವೆ ಬೆಳಗ್ಗೆ 5:30 ಕ್ಕೆ ಆರಂಭ

Share It

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ ಡಿ.8ರಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಒ) ಹುದ್ದೆಗಳಿಗೆ ಭಾನುವಾರ ಪರೀಕ್ಷೆ ನಡೆಸಲಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯಾಧಿಕಾರಿ ಡಾ.ಕೆ. ವೈಷ್ಣವಿ ಅವರ ಕೋರಿಕೆ ಮೇರೆಗೆ ಮೆಟ್ರೋ ರೈಲು ಸೇವೆಗಳನ್ನು ಬೆಳಗ್ಗೆ 5.30ಕ್ಕೆ ಆರಂಭಿಸಲಾಗುತ್ತಿದೆ.

ಪರೀಕ್ಷಾ ಅಭ್ಯರ್ಥಿಗಳು ಸಮಯಕ್ಕ ಸರಿಯಾಗಿ ಪರೀಕ್ಷಾ ಕೇಂದ್ರಗಳನ್ನು ತಲುಪಲು ಅನುಕೂಲವಾಗುವಂತೆ  ಬಿಎಂಆರ್‌ಸಿಎಲ್‌ಗೆ ಮೆಟ್ರೋ ರೈಲು ಸೇವೆಯನ್ನು ಬೇಗ ಆರಂಭಿಸುವಂತೆ ಕೋರಿದ್ದರು. ಅದರಂತೆ ಭಾನುವಾರ ಬೆಳಗ್ಗೆ 7:00. ಗಂಟೆಗೆ ಬದಲಾಗಿ 5:30ಕ್ಕೆ ಮೆಟ್ರೋ ರೈಲು ಸಂಚರಿಸಲಿವೆ ಎಂದು ಅಧಿಕಾರಿಗಳಯ ತಿಳಿಸಿದ್ದಾರೆ.

ಅದರಂತೆ ಡಿ.8ರಂದು ಭಾನುವಾರ ಬೆಳಗ್ಗೆ  5.30 ಗಂಟೆಗೆ ಎಲ್ಲ ನಾಲ್ಕು, ಟರ್ಮಿನಲ್ ನಿಲ್ಯಾಣಗಳಾದ ಮಾದಾವರ, ರೇಷ್ಮೆ ಸಂಸ್ಥೆ, ಚಲ್ಲಘಟ್ಟ ಮತ್ತು ವೈಟ್ ಫೀಲ್ಡ್ (ಕಾಡುಗೋಡಿ) ಮೆಟ್ರೋ ನಿಲ್ದಾಣಗಳಿಂದ ಸಂಚಾರ ಪ್ರಾರಂಭಿಸಲಾಗುವುದು.

ಅಲ್ಲದೆ, ನಾಡಪ್ರಭು ಕೆಂಪೇಗೌಡ ನಿಲ್ದಾಣ, ಮೆಜಿಸ್ಟಿಕ್‌ನಿಂದ ಎಲ್ಲ ನಾಲ್ಕು ದಿಕ್ಕಿಗೆ ಮೊದಲ ರೈಲು ಬೆಳಗ್ಗೆ 5.30 ಗಂಟೆಗೆ ಹೊರಡಲಿದೆ ಎಂದು ಬಿಎಂಆರ್ಸಿಎಲ್ ತಿಳಿಸಿದೆ. ಪರೀಕ್ಷಾ ಅಭ್ಯರ್ಥಿಗಳು ನಗದು ರಹಿತ ಟೆಕೆಟ್ ಪಡೆಯಲು ಮೆಟ್ರೋ ನಿಗಮವು ಹೆಚ್ಚಾಗಿ ಕ್ಯೂಆರ್ ಟಿಕೆಟ್ ಖರೀದಿಸಲು ಕೋರಿದೆ.


Share It

You cannot copy content of this page