ಸುದ್ದಿ

ನಾಲ್ವರು ಮಕ್ಕಳನ್ನು ಅಪಹರಣ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಜ್ಯೋತಿಷಿ ಅರೆಸ್ಟ್

Share It

ಕೋಲಾರ: ಮಕ್ಕಳ ಅಪಹರಣದ ಪ್ರಕರಣ
ಕೋಲಾರ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದ್ದು, ಕ್ಚಿಪ್ರ ಕಾರ್ಯಾಚರಣೆ ನಡೆಸಿದ ಬಂಗಾರಪೇಟೆ ಪೊಲೀಸರು ಆರೋಪಿ ರಾಯಚೂರು ಮೂಲದ ಜ್ಯೋತಿಷಿ ವಿಷ್ಣು ರಾವ್ ಎಂಬಾತನ್ನು ಬಂಧಿಸಿ, 4 ಬಾಲಕರನ್ನು ರಕ್ಷಣೆ ಮಾಡಿದ್ದಾರೆ.

ಬಂಗಾರಪೇಟೆಯ ದೇಶಿಹಳ್ಳಿಯ ನಾಲ್ವರು ಮಕ್ಕಳನ್ನು ವಿಷ್ಣು ರಾವ್ ಎಂಬ ಜೋತಿಷ್ಯ ಕಿಡ್ನಾಪ್ ಮಾಡಿದ್ದನು. ಅದಲ್ಲದೆ ಮಕ್ಕಳನ್ನು ಲಾಡ್ಜ್‌ನಲ್ಲಿ ಕೂಡಿ ಹಾಕಿ ಪೋಷಕರಿಂದ ಹಣ ಬೇಡಿಕೆ ಇಟ್ಟಿದ್ದೂ, ಅಪಹರಣಗೊಂಡ ಬಾಲಕ ಲಿಖಿತ್ ತಾಯಿ ಸುಮಂಗಲಿ ಎನ್ನುವವರು ತನ್ನ ಮಗ ಲಿಖಿತ್ ಹಾಗೂ ಮೂವರು ಬಾಲಕರು ಅಪಹರಣಗೊಂಡಿರುವ ಕುರಿತು ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದರು. ದೂರು ಆಧರಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಯನ್ನು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.

ಸುಮಂಗಲಿ ನೀಡಿದ ದೂರನ್ನು ಆಧರಿಸಿ ತನಿಖೆ ನಡೆಸಿದ ಪೊಲೀಸರು ಆರೋಪಿ, ಜ್ಯೋತಿಷಿ ವಿಷ್ಣು ರಾವ್ ಲಾಡ್ಜ್ ವೊಂದರಲ್ಲಿ ಮಕ್ಕಳನ್ನು ಕೂಡಿ ಹಾಕಿ ಹಣಕ್ಕೆ, ಬೇಡಿಕೆ ಇಡುತ್ತಿರುವುದನ್ನು ಪತ್ತೆ ಮಾಡಿದ್ದು ಆರೋಪಿಯನ್ನು ಬೆಂಗಳೂರಿನ ತ್ರಿವೇಣಿ ಚಿತ್ರಮಂದಿರದ ಬಳಿ ಬಂಧಿಸಿದ್ದಾರೆ. ಆರೋಪಿ ವಶದಲ್ಲಿದ್ದ ಲಿಬಿತ್ (16), ಶರತ್, ಮುಬಾರಕ್ ಹಾಗೂ ಹೇಮಂತ್ ಕುಮಾರ್ ಎಂಬ ಬಾಲಕರನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ.

ಬಂಧನವಾಗಿರುವ ರಾಯಚೂರು ಮೂಲದ ಜ್ಯೋತಿಷಿ ವಿಷ್ಣು ರಾವ್, ನಿಮ್ಮ ಟೈಂ ಸರಿಯಿಲ್ಲ ಎಂದು ವಾಮಾಚರಕ್ಕೆ ಮುಂದಾಗಿದ್ದ ಎಂದು ತಿಳಿದುಬಂದಿದೆ. ಸ್ವಾಮೀಜಿ ಬಳಿಯಿದ್ದ ನಿಂಬೆ ಹಣ್ಣು, ಮೂಳೆ ಸೇರಿದಂತೆ ವಾಮಾಚರಕ್ಕೆ ಬಳಸಿದ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಇನ್ನು ಘಟನೆ ಸಂಬಂಧ ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Share It

You cannot copy content of this page