ಬೆಂಗಳೂರು: ಗಾಂಜಾ ದಂಧೆಗೆ ನೆರವು ನೀಡಿ ಕರ್ತವ್ಯ ಲೋಪ ಎಸಗಿದ ಆರೋಪದ ಮೇಲೆ ಜೆ.ಜೆ.ನಗರ ಠಾಣೆಯ ಹೆಡ್ ಕಾನ್ಸ್‌ಟೇಬಲ್ ಕುಮಾರ್ ಹಾಗೂ ವಿಜಯನಗರ ಠಾಣೆಯ ಕಾನ್ಸ್‌ಟೇಬಲ್ ಅಣ್ಣಪ್ಪ ಕಿತ್ತೂರು ಅಮಾನತುಗೊಂಡಿದ್ದಾರೆ.
ಗಾಂಜಾ ಪೆಡ್ಲರ್ ಮೆಹರುನ್ನೀಸಾ ಎಂಬಾಕೆಗೆ ನೆರವು ನೀಡಿ ಕರ್ತವ್ಯಲೋಪವೆಸಗಿದ ಆರೋಪದ ಕೇಳಿ ಬಂಧ ಕಾರಣ ಪಶ್ಚಿಮ ವಿಭಾಗದ ಡಿಸಿಪಿ ಎಸ್.ಗಿರೀಶ್ ಅವರು ಅಮಾನತು ಮಾಡಿ ಆದೇಶಿಸಿದ್ದಾರೆ.
ಕಳೆದ ನವೆಂಬರ್ ನಲ್ಲಿ ಶಾಮಣ್ಷ ಗಾಡ್೯ನ್ ನಲ್ಲಿ ಗಾಂಜಾ ದಂಧೆಯಲ್ಲಿ ನಿರತಳಾಗಿದ್ದ ಮೆಹರುನ್ನೀಸಾ ಮನೆ ಮೇಲೆ ಬ್ಯಾಟರಾಯನಪುರ ಠಾಣೆ ಪೊಲೀಸರು ದಾಳಿ ನಡೆಸಿದ್ದರು. ಈ ಕಾರ್ಯಾಚರಣೆ ನಡೆದಾಗ ಬ್ಯಾಟರಾಯನಪುರ ಠಾಣೆಯಲ್ಲಿ ಎಚ್.ಸಿ ಕುಮಾರ್ ಹಾಗೂ ಕಾನ್ಸ್‌ಟೇಬಲ್ ಅಣ್ಣಪ್ಪ ಕಿತ್ತೂರು ಕಾರ್ಯನಿರ್ವಹಿಸುತ್ತಿದ್ದರು. ಆಗ ದಾಳಿ ಮಾಹಿತಿಯನ್ನು ಪೆಡ್ಲರ್ ಗೆ ನೀಡಿ ತಪ್ಪಿಸಿಕೊಳ್ಳಲು ಇಬ್ಬರು ನೆರವಾಗಿದ್ದರು ಎಂಬ ಆರೋಪ ಕೇಳಿ ಬಂದಿತ್ತು.
ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಯನ್ನು ಬಂಧಿಸಿ ಪರಪ್ಪನ ಅಗ್ರಹಾರ ಜೈಲಿಗಟ್ಟಿ ಆರೋಪಿಯಿಂದ 38 ಕೆ.ಜಿ ಗಾಂಜಾ ಜಪ್ತಿ ಮಾಡಲಾಗಿತ್ತು.