ನವದೆಹಲಿ: 158 ಸಿವಿಲ್ ನ್ಯಾಯಾಧೀಶರ ನೇಮಕಕ್ಕೆ ಕರ್ನಾಟಕ ಸರ್ಕಾರ ಹೇರಿದ್ದ ನಿರ್ಬಂಧದ ಹೊರತಾಗಿಯೂ, ಜಡ್ಜ್‌ಗಳ ನೇಮಕ ಮುಂದುವರೆಸಲು ಕರ್ನಾಟಕ ಹೈಕೋರ್ಟ್‌ಗೆ ಸುಪ್ರೀಂಕೋರ್ಟ್ ಒಪ್ಪಿಗೆ ನೀಡಿದೆ.
ಕರ್ನಾಟಕ ಸರ್ಕಾರ ಹೇರಿದ್ದ ನಿರ್ಬಂಧದ ವಿರುದ್ದ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರ ತ್ರಿಸದಸ್ಯ ಪೀಠ, ರಾಜ್ಯ ಸರ್ಕಾರಕ್ಕೆ ನೋಟಿಸ್ ನೀಡಿ. 158 ಜಡ್ಜ್‌ಗಳ ನೇರ ನೇಮಕಾತಿಯನ್ನು ಮುಂದುವರಿಸಬಹುದು. ಈ ಸೂಚನೆಯು ಪ್ರಸಕ್ತ ಸಲ್ಲಿಸಿರುವ ಅರ್ಜಿ ಅಂತಿಮ ತೀರ್ಪಿಗೆ ಒಳಪಟ್ಟಿರುತ್ತದೆ ಎಂದು ಕರ್ನಾಟಕ ಹೈಕೋರ್ಟ್‌ಗೆ ಸೂಚಿಸಿದೆ.
ಕಳೆದ ವರ್ಷ ನವೆಂಬರ್‌ನಲ್ಲಿ ಕರ್ನಾಟಕ ಸರ್ಕಾರವು ಕರ್ನಾಟಕ ನ್ಯಾಯಾಂಗ ಸೇವೆ (ನೇಮಕಾತಿ) ಕಾನೂನಿಗೆ ತಿದ್ದುಪಡಿ ತಂದು 1 ನ್ಯಾಯಾಧೀಶರ ನೇರ ನೇಮಕಾತಿಗೆ ತಡೆ ನೀಡಿತ್ತು.