ಬ್ಯಾಕ್‌ಲಾಗ್ ಹುದ್ದೆಗಳು ಸೇರಿದಂತೆ ಒಟ್ಟು 158 ಸಿವಿಲ್ ಜಡ್ಜ್ ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ. ವೇತನ ಶ್ರೇಣಿ ರೂ.77840-1,36,520 ಇದ್ದು, ಆಸಕ್ತರು ಅರ್ಜಿ ಸಲ್ಲಿಸಲು ಮಾರ್ಚ್ 12 ಕೊನೆ ದಿನವಾಗಿದೆ.
ಅರ್ಹತೆ: ಭಾರತದಲ್ಲಿನ ಕಾನೂನಿನ ಮೂಲಕ ಸ್ಥಾಪಿತವಾದ ವಿಶ್ವವಿದ್ಯಾಲಯವು ನೀಡಿದ ಕಾನೂನು ಪದವಿಯನ್ನು ಹೊಂದಿರಬೇಕು ಹಾಗೂ ಕಡ್ಡಾಯವಾಗಿ ವಕೀಲರಾಗಿ ನೋಂದಣಿ ಆಗಿರಬೇಕು. ಸಾಮಾನ್ಯ ವರ್ಗದ ಅಭ್ಯರ್ಥಿಗಳಗಿದ್ದರೆ ವಯೋಮಿತಿ 35 ವರ್ಷ ದಾಟಿರಬಾರದು. ಹಿಂದುಳಿದ ವರ್ಗಕ್ಕೆ ಸೇರಿದ್ದರೆ 38 ಮೀರಿರಬಾರದು. ಎಸ್ಸಿ-ಎಸ್ಟಿ ಅಭ್ಯರ್ಥಿಗಳಾಗಿದ್ದಲ್ಲಿ ವಯೋಮಿತಿ 40 ದಾಟಿರಬಾರದು. ಮಾಜಿ-ಸೈನಿಕ ಅಭ್ಯರ್ಥಿಗಳಿಗಾಗಿ, ಗರಿಷ್ಠ ವಯೋಮಿತಿಯಲ್ಲಿ ಮೂರು ವರ್ಷಗಳ ಸಡಿಲಿಕೆ ಇರುತ್ತದೆ.
ನೇಮಕಾತಿ ವಿಧಾನ: ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ 1) ಪೂರ್ವಭಾವಿ ಪರೀಕ್ಷೆ, 2) ಮುಖ್ಯ ಲಿಖಿತ ಪರೀಕ್ಷೆ ಮತ್ತು 3) ಮೌಖಿಕ ಪರೀಕ್ಷೆ ಎಂದು ಮೂರು ಹಂತಗಳ ಆಯ್ಕೆ ಪ್ರಕ್ರಿಯೆಗಳು ಇರುತ್ತವೆ.
ಪೂರ್ವಭಾವಿ ಪರೀಕ್ಷೆಯ ಅಂಕಗಳನ್ನು ಮುಖ್ಯ ಪರೀಕ್ಷೆಗೆ ಅರ್ಹತೆಗಾಗಿ ಮಾತ್ರ ಪರಿಗಣಿಸಲಾಗುತ್ತದೆ. ಒಟ್ಟು 100 ಅಂಕಗಳಿಗೆ ನಡೆಸುವ ಈ ಪರೀಕ್ಷೆಯಲ್ಲಿ, ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳು ಕನಿಷ್ಠ 50 ಅಂಕಗಳನ್ನು, ಇತರೆ ವರ್ಗದ ಅಭ್ಯರ್ಥಿಗಳು ಕನಿಷ್ಠ 60 ಅಂಕಗಳನ್ನು ಪಡೆಯಬೇಕಿರುತ್ತದೆ.
ಅರ್ಜಿ ಸಲ್ಲಿಕೆ ವಿಧಾನ: ಕರ್ನಾಟಕ ಹೈಕೋರ್ಟ್ ನ ವೆಬ್ ಸೈಟ್ ನಲ್ಲಿ ಲಿಂಕ್ ನೀಡಲಾಗಿದ್ದು ಅದರ ಮೂಲಕ ಅರ್ಹ ಅಭ್ಯರ್ಥಿಗಳು ಅರ್ಜಿ ಸಿವಿಲ್ ಜಡ್ಜ್ ನೇಮಕಾತಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಕೆಳಗಿನ ಲಿಂಕ್ ಬಳಸಬಹುದು. https://karnatakajudiciary.kar.nic.in/newwebsite/recsubnotify.php?p=803&stateNM=
ಲಿಂಕ್ ಓಪನ್ ಆದ ಪೇಜ್‌ನಲ್ಲಿ ‘Click Here To Apply Online’ ಎಂದಿರುವಲ್ಲಿ ಕ್ಲಿಕ್ ಮಾಡಿ.
ನಂತರ ಓಪನ್ ಆಗುವ ಪೇಜ್‌ನಲ್ಲಿ ಮೊದಲು ಬೇಸಿಕ್ ಡೀಟೇಲ್ಸ್ ನೀಡಿ ರಿಜಿಸ್ಟ್ರೇಷನ್ ಪಡೆಯಿರಿ.
ನಂತರ ಸವಿವರ ಮಾಹಿತಿ ನೀಡಿ, ಅರ್ಜಿ ಸಲ್ಲಿಸಬಹುದು.