ಮೈಸೂರು: ಪ್ರಕರಣವೊಂದನ್ನು ಇತ್ಯಾರ್ಥಪಡಿಸಲು ₹ 80 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟ ಆರೋಪದ ಮೇಲೆ ಪಿಎಸ್ಐ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿರುವ ಘಟನೆ ಮೈಸೂರು ಜಿಲ್ಲೆ, ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಠಾಣೆಯಲ್ಲಿ ನಡೆದಿದೆ.
ಮೈಸೂರಿನ ಬೆಟ್ಟದಪುರ ಠಾಣೆ ಪಿಎಸ್ಐ ಶಿವಶಂಕರ್ ₹ 80 ಸಾವಿರ ರೂ. ಲಂಚ ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು ಆರೋಪಿ ಪಿಎಸ್ಐ ನೇರವಾಗಿ ಲೋಕಾಯುಕ್ತ ಪೊಲೀಸರಗೆ ಸಿಕಿಬಿದ್ದಿದ್ದಾರೆ.
ಪ್ರಕರಣವೊಂದನ್ನು ಇತ್ಯಾರ್ಥ ಪಡಿಸಲು ಬೆಟ್ಟದಪುರ ಠಾಣೆ ಪಿಎಸ್ಐ ಶಿವಶಂಕರ್ ದೂರುದಾರರಿಂದ ₹80 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರಂತೆ, ಈ ಮಾಹಿತಿಯನ್ನು ದೂರುದಾರರು ಲೋಕಾಯುಕ್ತ ಪೊಲೀಸರಿಗೆ ತಿಳಿಸಿದ್ದು. ದೂರು ಬಂದ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಪಕ್ಕಾ ಪ್ಲಾನ್ ಮಾಡಿ ಆರೋಪಿಯನ್ನು ಬಲೆಗೆ ಬೀಳಿಸಿದ್ದಾರೆ.