ಸುದ್ದಿ

ಮಾರಕಾಸ್ತ್ರ ಹಿಡಿದು ವೀಲಿಂಗ್: 11 ಆರೋಪಿಗಳು ರೌಡಿಪಟ್ಟಿಗೆ: ಕಮಿಷನರ್ ಬಿ‌. ದಯಾನಂದ್‌

Share It

ಬೆಂಗಳೂರು: ಮಧ್ಯರಾತ್ರಿ ರಸ್ತೆಯಲ್ಲಿ ಮಾರಕಾಸ್ತ್ರ ಹಿಡಿದು ವೀಲಿಂಗ್ ಮಾಡುವ ಮೂಲಕ ಸಾರ್ವಜನಿಕರಲ್ಲಿ ಭಯ ಉಂಟು ಮಾಡಿದ್ದ 11 ಯುವಕರನ್ನು ಬಂಧಿಸಿಲಾಗಿದ್ದು ಇವರನ್ನು ರೌಡಿಪಟ್ಟಿಗೆ ಸೇರಿಸಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ಹೇಳಿದ್ದಾರೆ.

ಶುಕ್ರವಾರ ನಗರದ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪೂರ್ವ ವಿಭಾಗದ ಪೊಲೀಸರು ಮಾರಕಾಸ್ತ್ರ ಹಿಡಿದು ವೀಲಿಂಗ್ ಮಾಡಿದ ಆರೋಪದಡಿ ಸಾಹಿಲ್ ಹುಸೈನ್, ನಝದ್, ಅದ್ಘಾನ್ ಪಾಷಾ, ಸೇರಿದಂತೆ ಒಟ್ಟು 11 ಆರೋಪಿಗಳನ್ನು ಬಂಧಿಸಿದ್ದು, ಇವರಿಂದ 7 ದ್ವಿಚಕ್ರ ವಾಹನಗಳನ್ನ ಜಪ್ತಿ ಮಾಡಲಾಗಿದೆ ಎಂದರು.

ಫೆ.13ರಂದು ಈ ಆರೋಪಿಗಳು ಕೈಯಲ್ಲಿ ಮಾರಕಾಸ್ತ್ರಗಳನ್ನು ಹಿಡಿದು, ವೀಲಿಂಗ್ ಮಾಡುತ್ತಾ ಕೆ.ಜಿ.ಹಳ್ಳಿಯಿಂದ, ಡಿ.ಜೆ. ಹಳ್ಳಿ, ರಾಮಮೂರ್ತಿ ನಗರ ಮಾರ್ಗವಾಗಿ ಹೊಸಕೋಟೆ ಟೋಲ್ ವರೆಗೂ ಆರೋಪಿಗಳು ಹೋಗಿದ್ದರು. ಅದೇ ರೀತಿ ಕೆ.ಜಿ.ಹಳ್ಳಿಗೆ ವಾಪಸಾಗಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಸಾರ್ವಜನಿಕರಲ್ಲಿ ಭಯದ ವಾತಾವರಣ ಸೃಷ್ಟಿಮಾಡಿದ್ದರು.

ಈ ಸಂಬಂಧ ಕಾರ್ಯಾಚರಣೆ ನಡೆಸಿದ್ದ ಪೊಲೀಸರು ಆರೋಪಿಗಳ ವಿರುದ್ಧ ಡಿ.ಜೆ.ಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ಸದ್ಯ 11 ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.


Share It

You cannot copy content of this page