ನವದೆಹಲಿ: ತ್ರಿಭಾಷಾ ಸೂತ್ರ ಕಾನೂನು ಅಳ
ವಡಿಕೆ ಬಗ್ಗೆ ಪರ-ವಿರೋಧದ ಬಗ್ಗೆ ಚರ್ಚೆ ನಡುವೆಯೇ ರಾಜ್ಯಸಭೆ ಸದಸ್ಯೆ ಸುಧಾಮೂರ್ತಿ ಅವರು ತ್ರಿಭಾಷಾ ಸೂತ್ರವನ್ನು ಬೆಂಬಲಿಸಿ ಮಾತನಾಡಿದ್ದು ‘ ಒಬ್ಬರು ಹಲವು ಭಾಷೆಗಳನ್ನು ಕಲಿಯಬೇಕು’ ಎಂದು ಹೇಳಿದ್ದಾರೆ.
ಬುಧವಾರ ಸಂಸತ್ತಿನ ಹೊರಗೆ ಮಾಧ್ಯಮದವರ ಜೊತೆ ಮಾತನಾಡಿದ ಸುಧಾಮೂರ್ತಿ ಅವರು ಪ್ರತಿಯೊಬ್ಬರು ಬಹುಭಾಷೆಗಳನ್ನು ಕಲಿಯಬೇಕು ಎಂಬುದು ನನ್ನ ನಿಲುವು. ನಾನು ಸಹ 7 ರಿಂದ 8 ಭಾಷೆಗಳನ್ನು ಮಾತನಾಡುತ್ತೇನೆ. ತ್ರಿಭಾಷಾ ಸೂತ್ರದಿಂದ ವಿದ್ಯಾರ್ಥಿಗಳು ಸಹ ಸಾಕಾಷ್ಟು ಕಲಿಯಬಹುದು ಆ ಮೂಲಕ ಜ್ಞಾನ ಸಂಪಾದಿಸಬಹುದು ಎಂದರು.