ದಾವಣಗೆರೆ: “ಮನಸ್ಸುಗಳ ನಡುವೆ ಮೂಡಿದ ಸಣ್ಣಪುಟ್ಟ ಬಿರುಕುಗಳನ್ನು ಪ್ರೀತಿ ಮತ್ತು ಸಂಯಮದಿಂದ ಸರಿಪಡಿಸಿಕೊಳ್ಳಬಹುದು” ಎಂಬ ಮಾತಿಗೆ ದಾವಣಗೆರೆಯಲ್ಲಿ ನಡೆದ ರಾಷ್ಟ್ರೀಯ ಲೋಕ ಅದಾಲತ್ ಸಾಕ್ಷಿಯಾಯಿತು. ವಿವಿಧ ಕಾರಣಗಳಿಂದಾಗಿ ವಿಚ್ಛೇದನ ಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ದ 37 ದಂಪತಿಗಳು, ಲೋಕ ಅದಾಲತ್‌ನ ಆಶಯದಂತೆ ಮನಸ್ತಾಪ ಮರೆತು ಮತ್ತೆ ಒಂದಾಗಿ ಬಾಳಲು ನಿರ್ಧರಿಸಿದ್ದಾರೆ.
ದಾವಣಗೆರೆ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಭಾನುವಾರ ನಡೆದ ಈ ವಿಶೇಷ ವಿದ್ಯಮಾನದಲ್ಲಿ, ವಿಚ್ಛೇದನದ ಹೊಸ್ತಿಲಲ್ಲಿದ್ದ ದಂಪತಿಗಳು ಪರಸ್ಪರ ಹಾರ ಬದಲಿಸಿಕೊಳ್ಳುವ ಮೂಲಕ ಹೊಸ ಜೀವನಕ್ಕೆ ನಾಂದಿ ಹಾಡಿದರು. ನ್ಯಾಯಾಧೀಶರ ಸಮ್ಮುಖದಲ್ಲೇ ನಡೆದ ಈ ಭಾವುಕ ಕ್ಷಣಗಳು ನೆರೆದಿದ್ದವರ ಕಣ್ಣಾಲಿಗಳನ್ನು ತೇವಗೊಳಿಸಿದವು.
ಈ ಮಹತ್ವದ ಬೆಳವಣಿಗೆಗೆ ದಾವಣಗೆರೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಡಿ.ಕೆ. ವೇಲಾ ಅವರು ಹಸಿರು ನಿಶಾನೆ ತೋರಿ, ದಂಪತಿಗಳಿಗೆ ಶುಭ ಹಾರೈಸಿದರು.
ವಿಚ್ಛೇದನದಂತಹ ಗಂಭೀರ ಪ್ರಕರಣಗಳಲ್ಲಿ ದಂಪತಿಗಳ ಮನವೊಲಿಸಿ ಅವರನ್ನು ಮತ್ತೆ ಒಂದು ಮಾಡಿರುವುದು ಅತ್ಯಂತ ತೃಪ್ತಿ ನೀಡಿದೆ,” ಎಂದು ಸಂತಸ ವ್ಯಕ್ತಪಡಿಸಿದರು.