ಸುದ್ದಿ

ಕರ್ತವ್ಯದ ವೇಳೆಯಲ್ಲಿ ಬಾಡೂಟದ ಪಾರ್ಟಿ ಮಾಡುತ್ತಿದ್ದ 6 PDO ಗಳು ಸೇರಿ 9 ಮಂದಿ ಸಸ್ಪೆಂಡ್

Share It

ಬೆಂಗಳೂರು: ಕರ್ತವ್ಯದ ವೇಳೆಯಲ್ಲಿ ನಿಯಮ ಮೀರಿ ಪಾರ್ಟಿ ಮಾಡಿದ ಆರೋಪದ ಮೇಲೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ 6 ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು (PDO) ಸೇರಿದಂತೆ ಒಟ್ಟು 9 ಜನ ಸಿಬ್ಬಂದಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತು ಮಾಡಲಾಗಿದೆ.

ಶುಕ್ರವಾರ (ಜುಲೈ 24) ಕರ್ತವ್ಯದ ಸಮಯದಲ್ಲಿಯೇ ಅಧಿಕಾರಿಗಳು ಮತ್ತು ಸಿಬ್ಬಂದಿ ಒಟ್ಟಾಗಿ ಸೇರಿ ಸಿದ್ದರಬೆಟ್ಟದ ತಪ್ಪಲಿನಲ್ಲಿ ಮತ್ತು ಮಾಂಸದ ಪಾರ್ಟಿ (ಮೋಜು-ಮಸ್ತಿ) ನಡೆಸಿದ್ದರು. ಮಾಧ್ಯಮಗಳಲ್ಲಿ ವರದಿ ಪ್ರಸಾರವಾದ ಬೆನ್ನಲ್ಲೇ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ್ ಖಂಡ್ರೆ ಅವರ ಸೂಚನೆಯಂತೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ZP CEO ಡಾ. ವಾಸಂತಿ ಅಮರ್ ಅವರು ಇಲಾಖಾ ವಿಚಾರಣೆಯನ್ನು ಕಾಯ್ದಿರಿಸಿ ಅಮಾನತು ಆದೇಶ ಹೊರಡಿಸಿದ್ದಾರೆ.

ಅಮಾನತಾದ ಪಿಡಿಓಗಳು

​ಗಿರೀಶ್ – ಶಿವಗಂಗೆ ಗ್ರಾ.ಪಂ.​
ಹರೀಶ್ – ಅಗಳಕುಪ್ಪೆ ಗ್ರಾ.ಪಂ.​
ಪ್ರಶಾಂತ್ ಡಿ. – ಗೊಲ್ಲಹಳ್ಳಿ ಗ್ರಾ.ಪಂ.​
ಚಿರಂಜೀವಿ – ಮಣ್ಣೆ ಗ್ರಾ.ಪಂ.​
ರವಿಶಂಕರ್ – ಸೋಂಪುರ ಗ್ರಾ.ಪಂ.​
ದಿನೇಶ್ ಬಿ.ಎಂ. – ಬೆಟ್ಟಕೋಟೆ ಗ್ರಾ.ಪಂ

ಅಗಳಕುಪ್ಪೆ ಗ್ರೇಡ್ 1 ಕಾರ್ಯದರ್ಶಿ ಕೆಂಪರ೦ಗಯ್ಯ, ಬೂದಿಹಾಲ್ ಗ್ರಾ.ಪಂ. ಗ್ರೇಡ್ 2 ಕಾರ್ಯದರ್ಶಿ ಗಂಗಾಧರ್, ಸೋಂಪುರ ಗ್ರಾ.ಪಂ. ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಮಂಜುನಾಥ್ ಇವರುಗಳನ್ನು ಇಲಾಖಾ ವಿಚಾರಣೆ ಕಾಯ್ದಿರಿಸಿ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತು ಮಾಡಲಾಗಿದೆ.


Share It

You cannot copy content of this page