ಸುದ್ದಿ

ಬಿಎಂಟಿಸಿ ಬಸ್ಸಲ್ಲಿ ವಿದ್ಯಾರ್ಥಿನಿ ಜತೆ ಅಸಭ್ಯವಾಗಿ ವರ್ತಿಸಿದ ಪೊಲೀಸ್ ಕಾನ್ಸ್‌ಟೇಬಲ್ ಅಮಾನತು

Share It

ಈ-ನ್ಯೂಸ್ ವರದಿ: ಬೆಂಗಳೂರು

ಬಿಎಂಟಿಸಿ ಬಸ್‌ನಲ್ಲಿ ಕಾಲೇಜಿನ ವಿದ್ಯಾರ್ಥಿನಿ ಜತೆ ಅಸಭ್ಯವಾಗಿ ವರ್ತನೆ ತೋರಿದ ಆರೋಪದ ಮೇರೆಗೆ ಪೊಲೀಸ್ ಕಾನ್‌ಸ್ಟೇಬಲ್‌ಗೆ ಸಾರ್ವಜನಿಕರು ಮನ ಬಂದಂತೆ ಹಲ್ಲೆ ನಡೆಸಿರುವ ಘಟನೆ ಗಂಗಮ್ಮನಗುಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಸಂಜಯನಗರದ ಪೊಲೀಸ್ ಠಾಣೆಯ ಕಾನ್‌ಸ್ಟೇಬಲ್ ಮಂಜುನಾಥ್ ಹಲ್ಲೆಗೊಳಗಾಗಿದ್ದು, ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಕಾನ್‌ಸ್ಟೇಬಲ್‌ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಜಾಲಹಳ್ಳಿಯಿಂದ ದಾಸರಹಳ್ಳಿ ಮಾರ್ಗವಾಗಿ ಸೋಮವಾರ ಪ್ರಯಾಣಿಸುತ್ತಿದ್ದ ಬಿಎಂಟಿಸಿ ಬಸ್‌ನಲ್ಲಿ ಈ ಅಹಿತಕರ ಘಟನೆ ನಡೆದಿದೆ.

ಜಾಲಹಳ್ಳಿಯಲ್ಲಿ ಸೋಮವಾರ ಮಧ್ಯಾಹ್ನ ಬಿಎಂಟಿಸಿ ಬಸ್ ಗೆ ವಿದ್ಯಾರ್ಥಿನಿ ಹತ್ತಿದ್ದಾರೆ. ಅದೇ ವೇಳೆ ಆ ಬಸ್‌ನ್ನು ಕಾನ್‌ಸ್ಟೇಬಲ್ ಮಂಜುನಾಥ್ ಸಹ ಹತ್ತಿದ್ದಾರೆ. ಆಗ ಪ್ರಯಾಣದ ವೇಳೆ ವಿದ್ಯಾರ್ಥಿನಿ ಜತೆ ಆತ ಅಸಭ್ಯವಾಗಿ ನಡೆದುಕೊಂಡಿದ್ದಾನೆ.

ಹಲ್ಲೆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇಲಾಖೆಗೆ ಭಾರಿ ಮುಜುಗರ ಉಂಟು ಮಾಡಿದೆ. ಅನುಚಿತ ವರ್ತನೆ ಸಂಬಂಧ ಎಫ್‌ಐಆರ್ ದಾಖಲಾದ ಬೆನ್ನಲ್ಲೇ ಕಾನ್‌ಸ್ಟೇಬಲ್ ಮಂಜುನಾಥ್‌ನನ್ನು ಅಮಾನತುಗೊಳಿಸಿ ಹಾಗೂ ಇಲಾಖಾ ವಿಚಾರಣೆಗೆ ಬೆಂಗಳೂರು ಪೊಲೀಸ್ ಕಮಿಷನ್ ಸೀಮಂತ್ ಕುಮಾರ್‌ಸಿಂಗ್ ಆದೇಶಿಸಿದ್ದಾರೆ.


Share It

You cannot copy content of this page