ಮೈಸೂರು: ಸರ್ಕಾರದ ಉಚಿತ ಯೋಜನೆಗಳಿಂದ ಗಂಡ-ಹೆಂಡತಿ ನಡುವೆ ಜಗಳ ಶುರುವಾಗಿ ಮನೆಗಳು ಹಾಳಾಗಿವೆ. ಇದೊಂದು ಹುಚ್ಚು ಸರ್ಕಾರ, ಯಾವ ಮಾನದಂಡವೂ ಇಲ್ಲದ ಉಚಿತ ಯೋಜನೆಗಳು ಮೂರ್ಖತನದ್ದು ಎಂದು ಪರಿಷತ್ ಸದಸ್ಯ ಎಚ್.ವಿಶ್ವನಾಥ್ ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವೈಯಕ್ತಿಕ ತೆವಲಿಗಾಗಿ ಉಚಿತ ಯೋಜನೆ ಮಾಡಿ ರಾಜ್ಯವನ್ನು ಹಾಳು ಮಾಡಿದ್ದಾರೆ. ರಾಜ್ಯದಲ್ಲಿ ಆರ್ಥಿಕ ಶಿಸ್ತಿಲ್ಲ. ಅರಾಜಕತೆ ಸೃಷ್ಟಿಯಾಗಿದೆ ಎಂದರು. ಡಿ.ಕೆ ಶಿವಕುಮಾರ್ ಯಾಕೆ ಮುಖ್ಯಮಂತ್ರಿ ಆಗಬಾರದು? ಸರ್ಕಾರ ಬರಲು ಅವರ ಕೊಡುಗೆ ಇಲ್ವಾ? ಈ ಸರ್ಕಾರ ಬರಲು ದುಡಿದಿಲ್ವಾ? ಸಿದ್ದರಾಮಯ್ಯ ಕಾಂಗ್ರೆಸ್ಸನ್ನು ಕಟ್ಟಲೇ ಇಲ್ಲ. ಬೇರೆಯವರು ಕಟ್ಟಿದ ಕಾಂಗ್ರೆಸ್‌ಗೆ ಸಿದ್ದರಾಮಯ್ಯ ಬಂದು ಸೇರಿಕೊಂಡಿದ್ದಾರೆ ಅಷ್ಟೇ ಎಂದರು.