ಬೆಂಗಳೂರು: ನ್ಯಾಯಾಂಗ ವ್ಯವಸ್ಥೆಯಲ್ಲಿ ಆಡಳಿತಾತ್ಮಕ ಸುಧಾರಣೆ ತರಲು ಹಾಗೂ ಸಾರ್ವಜನಿಕ ಸೇವೆ ಹಿತದೃಷ್ಟಿ ಹಿನ್ನೆಲೆಯಲ್ಲಿ ಹೈಕೋರ್ಟ್ ವಿವಿಧ ಶ್ರೇಣಿಯ 452 ನ್ಯಾಯಾಂಗ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಹೈಕೋರ್ಟ್ ಆದೇಶಿಸಿದೆ.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ 123 ಜಿಲ್ಲಾ ನ್ಯಾಯಾಧೀಶರು, 113 ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು 216 ಸಿವಿಲ್ ನ್ಯಾಯಾಧೀಶರನ್ನು ವರ್ಗಾವಣೆ ಮಾಡಲಾಗಿದೆ. ಈ ಕುರಿತಂತೆ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಕೆ.ಎಸ್.ಭರತ್ ಕುಮಾರ್ ಅಧಿಸೂಚನೆ ಹೊರಡಿಸಿದ್ದಾರೆ.
ನ್ಯಾಯಾಂಗ ಅಧಿಕಾರಿಗಳ ವರ್ಗಾವಣೆಯು ಮುಂದಿನ ಜೂನ್ 2ರಿಂದ ಜಾರಿಗೆ ಬರಲಿದೆ ಎಂದು ಮೇ 2ರಂದು ಹೊರಡಿಸಿರುವ ನೋಟಿಫಿಕೇಷನ್ ನಲ್ಲಿ ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗೆ ಹೈಕೋರ್ಟ್ ವೆಬ್ ವೀಕ್ಷಿಸಬಹುದು
ರಾಜ್ಯದಲ್ಲಿ 452 ನ್ಯಾಯಾಧೀಶರ ವರ್ಗಾವಣೆ: ಹೈಕೋರ್ಟ್ ಆದೇಶ
