ಸುದ್ದಿ

ಅನಧಿಕೃತ ಪಿಜಿಗಳ ವಿರುದ್ಧ ಕ್ರಮ : ಡಾ.ಪರಮೇಶ್ವರ್

Share It

ಬೆಂಗಳೂರು: ನಗರದಲ್ಲಿ ಅಧಿಕೃತ ಹಾಗೂ ಅನಧಿಕೃತ ಪಿಜಿಗಳು (ಪೇಯಿಂಗ್ ಗೆಸ್ಟ್) ಎಷ್ಟಿವೆ ಎಂದು ಮಾಹಿತಿ ಪಡೆಯಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅನಧಿಕೃತ ಪಿಜಿಗಳು ಇದ್ದರೆ ಕ್ರಮ ಕೈಗೊಳ್ಳುತ್ತೇವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.

ಎಚ್‌ಎಸ್‌ಆ‌ರ್ ಬಡಾವಣೆಯ ಪಿಜಿ ಯುವತಿ ರಸ್ತೆಯಲ್ಲಿ ನಗ್ನವಾಗಿ ನಡೆದಾಡಿರುವ ಕುರಿತು ಸಾಮಾಜಿಕ ಜಾತತಾಣದಲ್ಲಿ ಸುದ್ದಿಯಾಗಿರುವ ಕುರಿತು ಮಾತನಾಡಿದ ಅವರು ಅಧಿಕೃತ, ಅನಧಿಕೃತ ಪಿಜಿಗಳ ಬಗ್ಗೆ ಮಾಹಿತಿ ಪಡೆಯಲು ಈಗಾಗಲೇ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಮಾಹಿತಿ ಬಂದ ನಂತರ ಅನಧಿಕೃತ ಪಿಜಿಗಳು ಕಂಡುಬಂದರೆ ಅವುಗಳ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ. ಈ ಸಂಬಂಧ ಬಿಬಿಎಂಪಿ ನಿಗಾ ವಹಿಸಬೇಕು ಎಂದು ಹೇಳಿದರು.


Share It

You cannot copy content of this page