ಬೆಂಗಳೂರು: ವಿಚಾರಣಾಧೀನ ಕೈದಿಯೊಬ್ಬ ಜೈಲಿನೊಳಗಿದ್ದುಕೊಂಡೆ ಮಾದಕ ವಸ್ತು ಕಳ್ಳ ಸಾಗಣಿಕೆಯಿಂದ ಅಕ್ರಮವಾಗಿ ಗಳಿಸಿದ್ದ 8.71 ಲಕ್ಷ ರು ಹಣವನ್ನು ಸಿಸಿಬಿ ಪೊಲೀಸರು ಮುಟ್ಟಗೋಲು ಹಾಕಿಕೊಂಡಿದ್ದಾರೆ.
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಯಾಗಿರುವ 32 ವರ್ಷದ ಅಮೀರ್ ಖಾನ್ ಎಂಬಾತ ಜೈಲಿನಿಂದಲೇ ತನ್ನ ಮಾದಕ ದ್ರವ್ಯ ಜಾಲವನ್ನು ನಡೆಸುಥತಿದ್ದ. ಒಂದು ವರ್ಷಕ್ಕೂ ಹೆಚ್ಚು ಕಾಲ ಕೇಂದ್ರ ಕಾರಾಗೃಹದಲ್ಲಿದ್ದ ಆತನ ವಿರುದ್ಧ 2 ಪ್ರಕರಣಗಳು ದಾಖಲಾಗಿದ್ದು, ಸದ್ಯ ವಿಚಾರಣೆಯ ಹಂತದಲ್ಲಿವೆ. ನಗರದಲ್ಲಿ ಮೊದಲು ಮಾದಕ ದ್ರವ್ಯ ಗ್ರಾಹಕನನ್ನು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವಿಚಾರಣೆಯ ಸಮಯದಲ್ಲಿ ಮಾದಕ ದ್ರವ್ಯಗಳನ್ನು ಎಲ್ಲಿಗೆ ತಲುಪಿಸಬೇಕು ಮತ್ತು ಯಾವ ಬ್ಯಾಂಕ್ ಖಾತೆಗೆ ಹಣವನ್ನು ವರ್ಗಾಯಿಸಬೇಕು ಎಂಬುದರ ಕುರಿತು ವಿಚಾರಣಾಧೀನ ಕೈದಿ ಅಮೀರ್ ಖಾನ್ ಫೋನ್ ಮೂಲಕ ಸೂಚನೆ ನೀಡುತ್ತಿದ್ದ ಎಂದು ಮಾರಾಟಗಾರ ಮಾದಕ ದ್ರವ್ಯ ಕಳ್ಳ ಸಾಗಣೆ ಜಾಲವನ್ನು ಬಹಿರಂಗಪಡಿಸಿದ್ದಾನೆ.