ಸುದ್ದಿ

ಪಟೇಲ್ ಲಾ ಕಾಲೇಜು ವತಿಯಿಂದ ರಾಷ್ಟ್ರೀಯ ಸೇವಾ ಯೋಜನೆ ಶಿಬಿರ

Share It

7 ದಿನಗಳ ವಿಶೇಷ ಎನ್ಎಸ್ಎಸ್ ವಾರ್ಷಿಕ ಶಿಬಿರದಲ್ಲಿ ಸ್ವಯಂ ಸೇವಕರಿಂದ ಸಮುದಾಯ ಸೇವೆ

ಬೆಂಗಳೂರು: ನಗರದ ಪಟೇಲ್ ಲಾ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕವು ಏಪ್ರಿಲ್ 10 ರಿಂದ ಏಪ್ರಿಲ್ 16, 2025 ರವರೆಗೆ ನೆಲಮಂಗಲದ ಮಂಟನಕುರುಚಿ ಗ್ರಾಮದಲ್ಲಿ 7 ದಿನಗಳ ವಿಶೇಷ ಶಿಬಿರವನ್ನು ಯಶಸ್ವಿಯಾಗಿ ಆಯೋಜಿಸಿತು.

ಈ ಶಿಬಿರದ ಮುಖ್ಯ ಉದ್ದೇಶ ವಿದ್ಯಾರ್ಥಿ ಸ್ವಯಂಸೇವಕರಲ್ಲಿ ಸಮುದಾಯ ಸೇವೆ, ಸಾಮಾಜಿಕ ಜಾಗೃತಿ ಮತ್ತು ನಾಯಕತ್ವದ ಗುಣಗಳನ್ನು ಉತ್ತೇಜಿಸುವುದು. ಈ ನಿಟ್ಟಿನಲ್ಲಿ ಸ್ವಯಂ ಸೇವಕರುಗಳ ಗ್ರಾಮ ಸಮುದಾಯದ ಸೇವೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಶಿಬಿರವನ್ನು ಅರ್ಥಪೂರ್ಣಗೊಳಿಸಿದರು.

ಈ ಏಳು ದಿನಗಳ ಶಿಬಿರವು ಪಟೇಲ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಶ್ರೀ ಸಂಪತ್ ಕುಮಾರ್ ಆರ್ ಅವರ ಮಾರ್ಗದರ್ಶನ ಮತ್ತು ನೇತೃತ್ವದಲ್ಲಿ ಉಪಾಧ್ಯಕ್ಷೆ ಶ್ರೀಮತಿ ಆಶಾ ಸಂಪತ್ ಕುಮಾರ್, ವ್ಯವಸ್ಥಾಪಕ ನಿರ್ದೇಶಕಿ ಡಾ. ಅರ್ಪಿತಾ ಆದಿತ್ಯ, ಕಾರ್ಯನಿರ್ವಾಹಕ ನಿರ್ದೇಶಕರಾದ ಶ್ರೀ ಆದಿತ್ಯ ಶರ್ಮಾ, ಪ್ರಾಂಶುಪಾಲ ನಿರ್ದೇಶಕರಾದ ಶ್ರೀ ಶರತ್ ಚಂದ್ರ ಕಾಮತ್ ಕೆ ಹಾಗೂ ಪ್ರಾಚಾರ್ಯರಾದ ಶ್ರೀ ಮಯಿಲ್ಪಾಮಿ ಅವರುಗಳ ಸಹಕಾರ,ಪ್ರೋತ್ಸಾಹ ಶಿಬಿರವನ್ನು ಯಶಸ್ವಿಯಾಗಿಸಿತು.

ಏಳು ದಿನಗಳ ಶಿಬಿರದಲ್ಲಿ ಸ್ವಯಂ ಸೇವಕರುಗಳು ಮುಖ್ಯವಾಗಿ ಗ್ರಾಮದಲ್ಲಿ ಸ್ವಚ್ಚತಾ ಅಭಿಯಾನ, ಮಹಿಳಾ ಸಬಲೀಕರಣ, ಕಾನೂನು ಅರಿವು, ಗಿಡ ನೆಡುವ ಮೂಲಕ ಪರಿಸರ ಅರಿವು, ಆರೋಗ್ಯ ಶಿಬಿರ, ಶಿಕ್ಷಣ ಜಾಗೃತಿ…ಹೀಗೆ ಹತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಸಮುದಾಯ ಸೇವೆಯನ್ನು ಸಾರ್ಥಕಗೊಳಿಸಿದರು. 

ಪ್ರತಿದಿನ ಬೆಳಿಗ್ಗೆ ಧ್ವಜಾರೋಹಣ ಹಾಗೂ ದೈಹಿಕ ವ್ಯಾಯಾಮದ ಮೂಲಕ ಶಿಬಿರ ಪ್ರಾರಂಭವಾಗುತ್ತಿದ್ದು ಶಿಸ್ತು, ಏಕತೆ ಮತ್ತು ಆರೋಗ್ಯದ ಬಗ್ಗೆ ಒತ್ತು ನೀಡುವುದರ ಜೊತೆಗೆ ನಾಟಕ,ನೃತ್ಯ,ಗಾಯನ ಹೀಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಗ್ರಾಮದಲ್ಲಿ ಆಯೋಜಿಸುವ ಮೂಲಕ ಗ್ರಾಮದ ಜನರಿಗೆ ಅಭಿವ್ಯಕ್ತಿ ಕೌಶಲ್ಯ, ಪ್ರತಿಭೆಗಳನ್ನು ಪ್ರದರ್ಶಿಸಿ ಮನರಂಜನೆ ನೀಡಿದರು. ಸ್ವಯಂ ಸೇವಕರುಗಳು ತಂಡಗಳಾಗಿ ಕಾರ್ಯಗಳನ್ನು ಮಾಡುವ ಮೂಲಕ ನಾಯಕತ್ವ, ಕೌಶಲ್ಯದ ದಕ್ಷತೆಯನ್ನು ಅಭಿವೃದ್ಧಿಪಡಿಸಿಕೊಂಡರು.

ಇನ್ನೂ ಶಿಬಿರದಲ್ಲಿ ಮುಖ್ಯ ಅತಿಥಿಗಳು ಮತ್ತು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದ ಕೆಎಎಸ್ ಅಧಿಕಾರಿ ಶ್ರೀ ಪ್ರಭಾಕರ್ ಶಿಬಿರವನ್ನು ಉದ್ಘಾಟಿಸಿದರು. ಶ್ರೀ ದಯಾಳ್ ಕಿಶೋರ್ ಝಾ, ಶ್ರೇಯಾ, ಡಾ.ಚೇತನ, ಶ್ರೀ ಕಿಶೋರ್ ಕುಮಾರ್ ಮತ್ತು ನೆಹಾ ಬುವಾನಿಯಾ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡು ಉಪನ್ಯಾಸ ನೀಡಿದರು.

ಏಳು ದಿನಗಳ ವಿಶೇಷ ವಾರ್ಷಿಕ ಶಿಬಿರದಲ್ಲಿ ಎನ್ಎಸ್ಎಸ್ ಕಾರ್ಯಕ್ರಮ ಸಂಯೋಜಕರಾದ ಮಂಜುನಾಥ್ ಪ್ರಾಧ್ಯಾಪಕರಾದ ವಿ, ಶ್ರೀಮತಿ ಸವಿತಾ ಸ್ವಾಮಿ, ಶ್ರೀಮತಿ ಮಾಲಿನಿ, ಶ್ರೀ ಅನೀಶ್ ಮತ್ತು ಶ್ರೀ ಕಿಶನ್ ಅವರುಗಳು ಸ್ವಯಂ ಸೇವಕರುಗಳಿಗೆ ಸಲಹೆ, ಸಹಕಾರ ನೀಡುವ ಮೂಲಕ ಶಿಬಿರವನ್ನು ಯಶಸ್ವಿಯಾಗಿಸಿದರು.


Share It

You cannot copy content of this page