ಸುದ್ದಿ

ಲೇಖಕಿ ಬಾನು ಮುಸ್ತಾಕ್ ಅವರ ಪುಸ್ತಕದ ಅನುವಾದಿತ ಕೃತಿ Heart Lamp ಗೆ ಪ್ರತಿಷ್ಠಿತ ಬೂಕರ್ ಪ್ರಶಸ್ತಿ

Share It

ಲಂಡನ್: ಅತಿ ಹೆಚ್ಚು ಜ್ಞಾನಪೀಠ ಗೆದ್ದ ಕನ್ನಡಕ್ಕೆ ಈಗ ಮತ್ತೊಂದು ಗರಿ. ಸಾಹಿತಿ ಬಾನು ಮುಸ್ತಾಕ್ ಅವರ, ಸಣ್ಣ ಕತೆಗಳ ಅನುವಾದಿತ ಕೃತಿ Heart Lamp ಗೆ ಪ್ರತಿಷ್ಠಿತ ಬೂಕರ್ ಪ್ರಶಸ್ತಿ ಲಭಿಸಿದೆ.

ದೀಪಾ ಭಸ್ತಿ ಅನುವಾದಿಸಿರುವ ಹಾರ್ಟ್ ಲ್ಯಾಂಪ್ ಕೃತಿಯು 1990 ಮತ್ತು 2023ರ ನಡುವೆ ಬಾನು ಮುಸ್ತಾಕ್ ಅವರ 12 ಸಣ್ಣ ಕಥೆಗಳ ಸಂಗ್ರಹವಾಗಿದೆ.

ಇದರೊಂದಿಗೆ, ಇದೇ ಮೊದಲ ಬಾರಿಗೆ ಕನ್ನಡದ ಕೃತಿಗೆ ಈ ಪ್ರತಿಷ್ಠಿತ ಪ್ರಶಸ್ತಿ ದೊರೆತಂತಾಗಿದೆ. ಪ್ರಶಸ್ತಿಯು ಅಂದಾಜು 57.28 ಲಕ್ಷ (50 ಸಾವಿರ ಪೌಂಡ್) ನಗದು ಒಳಗೊಂಡಿದೆ.

1990 ಮತ್ತು 2023ರ ನಡುವೆ ಪ್ರಕಟಗೊಂಡ 12 ಕತೆಗಳನ್ನೊಳಗೊಂಡ ಈ ಸಂಕಲನವನ್ನು ದೀಪಾ ಭಸ್ತಿ ಅವರು ಕನ್ನಡದಿಂದ ಇಂಗ್ಲಿಷ್‌ಗೆ ಅನುವಾದಿಸಿದ್ದಾರೆ. ಮುಸ್ಲಿಂ ಸಮುದಾಯದ ಬಾಲಕಿಯರು ಹಾಗೂ ಹೆಣ್ಣುಮಕ್ಕಳ ದೈನಂದಿನ ಬದುಕು ಈ ಕತೆಗಳಲ್ಲಿ ಅನಾವರಣಗೊಂಡಿದೆ.

ಟೇಟ್‌ ಮಾಡರ್ನ್‌ನಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿರುವ ಮುಸ್ತಾಕ್, ತಮ್ಮ ಗೆಲುವನ್ನು ವೈವಿಧ್ಯತೆಗೆ ದೊರೆತ ಜಯ ಎಂದು ಬಣ್ಣಿಸಿದ್ದಾರೆ.

ಫ್ರೆಂಚ್‌ನಿಂದ ಅನುವಾದವಾದ ಎರಡು ಕೃತಿಗಳು, ಜಪಾನ್, ಇಟಾಲಿಯನ್ ಹಾಗೂ ಡ್ಯಾನಿಷ್ ಭಾಷೆಯ ತಲಾ ಒಂದು ಕೃತಿ ಅಂತಿಮ ಆಯ್ಕೆ ಪಟ್ಟಿಯಲ್ಲಿದ್ದವು


Share It

You cannot copy content of this page