ಸುದ್ದಿ

ಸಿವಿಲ್ ಜಡ್ಜ್ ಹುದ್ದೆಗೆ ಕನಿಷ್ಠ 3 ವರ್ಷಗಳ ವಕೀಲಿಕೆ ವೃತ್ತಿಯ ಅನುಭವ ಕಡ್ಡಾಯ: ಸುಪ್ರೀಂಕೋರ್ಟ್

Share It

ನವದೆಹಲಿ: ಆರಂಭಿಕ ಹಂತದ ಸಿವಿಲ್‌ ನ್ಯಾಯಾಧೀಶರ ಹುದ್ದೆಗೆ ನೇಮಕಾತಿಯಾಗಲು ಬಯಸುವ ಅಭ್ಯರ್ಥಿಗಳು ವಕೀಲರಾಗಿ ಕನಿಷ್ಠ ಮೂರು ವರ್ಷಗಳ ಅನುಭವ ಹೊಂದಿರಬೇಕು ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ. ಮುಖ್ಯ ನ್ಯಾಯಮೂರ್ತಿ ಬಿ.ಆ‌ರ್. ಗವಾಯಿ, ನ್ಯಾ. ಎ.ಜಿ. ಮಸಿಹ್ ಮತ್ತು ಕೆ. ವಿನೋದ್ ಚಂದ್ರನ್ ಅವರನ್ನೊಳಗೊಂಡ ಪೀಠವು ಈ ತೀರ್ಪು ನೀಡಿದೆ.

ಕಿರಿಯ ವಿಭಾಗದ ಸಿವಿಲ್ ನ್ಯಾಯಾಧೀಶರ ಹುದ್ದೆಗಳ ನೇಮಕಾತಿಯಲ್ಲಿ ಸುಧಾರಣೆಕೋರಿ ಅಖಿಲ ಭಾರತ ನ್ಯಾಯಾಧೀಶರ ಸಂಘ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯ ಮೂರ್ತಿ ಬಿ. ಅರ್. ಗವಾಯಿ ನೇತೃತ್ವದ ಪೀಠ ತೀರ್ಪು ನೀಡಿದೆ.

ನ್ಯಾಯಾಧೀಶರಿಗೆ ಅನುಭವದ ಮಹತ್ವವನ್ನು ಪೀಠವು ಒತ್ತಿ ಹೇಳಿದೆ. ‘ಹಲವಾರು ಹೈಕೋರ್ಟ್‌ಗಳು ಗಮನಿಸಿದಂತೆ, ಹೊಸ ಕಾನೂನು ಪದವೀಧರರ ನೇಮಕಾತಿಯು (ಜಡ್ಜ್ ಹುದ್ದೆಗೆ ನೇಮಕಾತಿ) ಅನೇಕ ತೊಂದರೆ ಸೃಷ್ಟಿಸಿದೆ. ದಕ್ಷತೆ ಮತ್ತು ಸಾಮರ್ಥ ಖಚಿತಪಡಿಸಿಕೊಳ್ಳಲು ಪ್ರಾಯೋಗಿಕ ಅನುಭವ ಅತ್ಯಗತ್ಯ’ ಎಂದಿದೆ.

ಕನಿಷ್ಠ 3 ವರ್ಷಗಳ ಕಾನೂನು ಅಭ್ಯಾಸದ ಅವಶ್ಯಕತೆ ಯು ತಳಮಟ್ಟದಲ್ಲಿ ನ್ಯಾಯಾಂಗ ಅಧಿಕಾರಿಗಳ ಗುಣಮಟ್ಟ ಹೆಚ್ಚಿಸಲು ಸಹಾಯ ಮಾಡುತ್ತದೆ. ಹೀಗಾಗಿ ಆರಂಭಿಕ ಹಂತದ ಜಡ್ಜ್ ಆಗಲು ಕನಿಷ್ಠ 3 ವರ್ಷಗಳ ಅನುಭವ ಕಡ್ಡಾಯ ಎಂದು ಪೀಠ ಹೇಳಿದೆ.


Share It

You cannot copy content of this page