ಸುದ್ದಿ

ಜಾಮೀನು ಸಿಕ್ಕಿದ್ದಕ್ಕೆ ರೋಡ್ ಶೋ: ಗ್ಯಾಂಗ್ ರೇಪ್ ಪ್ರಕರಣದ ಆರೋಪಿಗಳಿಗೆ ಮತ್ತೆ ನ್ಯಾಯಾಂಗ ಬಂಧನ

Share It

ಹಾವೇರಿ: ಜಾಮೀನು ಸಿಕ್ಕದ್ದಕ್ಕೆ ಕಾರುಗಳಲ್ಲಿ ರೋಡ್‌ ಶೋ ನಡೆಸಿ, ವಿಜಯೋತ್ಸವ ಆಚರಿಸಿದ್ದ ಹಾನಗಲ್ ಗ್ಯಾಂಗ್ ರೇಪ್ ಪ್ರಕರಣದ ಏಳು ಆರೋಪಿಗಳಿಗೆ ಕೋರ್ಟ್ ಶನಿವಾರ ಮತ್ತೆ ನ್ಯಾಯಾಗ ಬಂಧನಕ್ಕೆ ಆದೇಶಿಸಿದೆ.

ಜೈಲಿನಿಂದ ಗುರುವಾರ ರಾತ್ರಿ ಬಿಡುಗಡೆಯಾಗಿದ್ದ ಎಲ್ಲಾ ಏಳು ಆರೋಪಿಗಳನ್ನು ಶುಕ್ರವಾರ ಬಂಧಿಸಿದ್ದ ಹಾನಗಲ್ ಠಾಣೆ ಪೊಲೀಸರು ಶನಿವಾರ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ವಿಚಾರಣೆ ನಡೆಸಿದ ಕೋರ್ಟ್, ಆರೋಪಿಗಳನ್ನು ಜೂನ್ 2 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಏಳು ಆರೋಪಿಗಳ ಜಾಮೀನು ರದ್ದು ಮಾಡುವಂತೆ ಕೋರಿ ಅರ್ಜಿ ಸಲ್ಲಿಸುತ್ತೇವೆ ಎಂದು ಹಾವೇರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಶು ಕುಮಾರ್ ಶ್ರೀವಾಸ್ತವ ಅವರು ತಿಳಿಸಿದ್ದಾರೆ.

ಹಾವೇರಿ ಸಬ್ ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆಯಾದ ಆರೋಪಿಗಳಾದ ಅಫ್ತಾದ್‌ಚಂದನ ಕಟ್ಟಿ, ಮದರ್‌ಸಾಬ್‌ ಮಂಡಕ್ಕಿ, ಸಮಿವುಲ್ಲ ಲಾಲನವರ್, ಮೊಹ್ಮದ್ ಸಾದಿಕ್ ಅಗಸಿನಿ, ಶೋಯಿಬ್ ಮುಲ್ಲ, ತೌಸಿಫ್‌ಚೋಟಿ ಮತ್ತು ರಿಯಾಜ್‌ಸೆವಿಕೇರಿ ಇವರುಗಳು ಕಾರುಗಳಲ್ಲಿ ಬೈಕ್‌ಗಳಲ್ಲಿ ರೋಡ್ ಶೋ ನಡೆಸಿ ವಿಜಯೋತ್ಸವ ಆಚರಿಸಿರುವ ವೀಡಿಯೊಗಳು ವೈರಲ್ ಆಗಿದ್ದವು. ಪೊಲೀಸರು ಈ 7 ಆರೋಪಿಗಳನ್ನು ಬಂಧಿಸಿ ಮತ್ತೆ ಹಾವೇರಿ ಜೈಲಿಗೆ ಅಟ್ಟಿದ್ದಾರೆ.


Share It

You cannot copy content of this page