ಹರಿದ್ವಾರ: ಉತ್ತರಾಖಂಡದ ಹರಿದ್ವಾರದಲ್ಲಿ ಬಿಜೆಪಿ ನಾಯಕಿ ತನ್ನ ಬಾಯ್‌ಫ್ರೆಂಡ್ ಹಾಗೂ ಆತನ ಸ್ನೇಹಿತನಿಂದ ಸ್ವಂತ ಮಗಳ ಮೇಲೆಯೇ ಅತ್ಯಾಚಾರ ಮಾಡಿಸಿ ನೀಚ ಕೃತ್ಯ ಎಸಗಿದ್ದಾಳೆ.
ಹರಿದ್ವಾರದ ಬಿಜೆಪಿ ಮಹಿಳಾಮೋರ್ಚಾದ ಮಾಜಿ ಅಧ್ಯಕ್ಷೆ ಅನಾಮಿಕಾ ಶರ್ಮಾ ತನ್ನ 13 ವರ್ಷದ ಮಗಳ ಮೇಲೆಯೇ ಅತ್ಯಾಚಾರ ಮಾಡಿಸಿರುವಾಕೆ. ಘಟನೆ ಸಂಬಂಧ ತಾಯಿ ಅನಾಮಿಕಾ, ಆಕೆಯ ಬಾಯ್ ಫ್ರೆಂಡ್ ಸುಮಿತ್ ಪತ್ವಾಲ್ ಮತ್ತು ಆತನ ಸ್ನೇಹಿತ ಶುಭಂನನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣ ಬೆಳಕಿಗೆ ಬಂದ ಬಳಿಕ ಆಕೆಯನ್ನು ಪಕ್ಷದಿಂದ ಬಿಜೆಪಿ ವಜಾ ಮಾಡಿದೆ.
ಏನಿದು ಪ್ರಕರಣ?: ಆರೋಪಿ ಅನಾಮಿಕಾ ಶರ್ಮಾ
ತನ್ನ ಗಂಡನಿಂದ ಬೇರ್ಪಟ್ಟಿದ್ದಳು. ಆದರೆ ಮಗಳು ಅಪ್ಪನೊಂದಿಗೆ ಇದ್ದು ಅಪರೂಪಕ್ಕೆ ತಾಯಿ ಬಳಿ ಬರುತ್ತಿದ್ದಳು. ಈ ವೇಳೆ ಅನಾಮಿಕಾ, ಬಾಯ್ ಫ್ರೆಂಡ್ ಸುಮಿತ್ ನ ಪ್ರೇಮ ಸಂಪಾದಿಸಿ ಆತನ ಹೋಟೆಲ್ ನಲ್ಲಿಯೇ ಉಳಿದುಕೊಂಡಿದ್ದಳು. ಜನವರಿಯಿಂದ ಮಾರ್ಚ್ ವೇಳೆ ಹರಿದ್ವಾರ, ಬೃಂದಾವನ ಮತ್ತು ಆಗ್ರಾ ದಲ್ಲಿ ಹಲವು ಬಾರಿ ಮಗಳ ಮೇಲೆ ಸುಮಿತ್ ಹಾಗೂ ಆತನ ಸ್ನೇಹಿತ ಶುಭಂನಿಂದ ಅತ್ಯಾಚಾರ ಮಾಡಿಸಿದ್ದಳು. ಜೊತೆಗೆ ಇದನ್ನು ತಂದೆಗೆ ಹೇಳದಂತೆ ಮಗಳಿಗೆ ಬೆದರಿಕೆ ಹಾಕಿದ್ದಳು ಎನ್ನಲಾಗಿದೆ.
ಮಂಗಳವಾರ ನಡೆದ ಘಟನೆ ಬಗ್ಗೆ ಅಪ್ರಾಪ್ತೆ ತನ್ನ ತಂದೆಗೆ ಮಾಹಿತಿ ನೀಡಿದ್ದಳು. ಪರಿಣಾಮ ತಂದೆ ನೀಡಿದ ದೂರಿನ ಮೇರೆಗೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಪೋಕ್ಸೋ ಕಾಯ್ದೆ ಸೇರಿದಂತೆ ವಿವಿಧ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.