ಬೆಂಗಳೂರು: ಕನ್ನಡ ಸೇರಿ ಪ್ರಥಮ ಭಾಷೆಗಳಿಗೆ 125 ಅಂಕದ ಬದಲು 100 ಅಂಕಗಳಿಗೆ ಇಳಿಸುವ ಮೂರ್ಖ ನ ನಿರ್ಧಾರವನ್ನು ಕೂಡಲೇ ವಾಪಸ್ ಪಡೆದು ಕನ್ನಡಿಗರ ಕ್ಷಮೆ ಯಾಚಿಸಬೇಕು ಎಂದು ಕೇಂದ್ರ ರೇಲ್ವೆ ಮತ್ತು ಜಲಶಕ್ತಿ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಕನ್ನಡಪರ ಹೋರಾಟಕ್ಕೊಂದು ಸಂವೇದನಾ ಪರಂಪರೆ ಮತ್ತು ಇತಿಹಾಸವಿದೆ. ಇದರ ಅರಿವಿರದ ಶಾಲಾ ಶಿಕಗಷಣ ಸಚಿವ ಮಧು ಬಂಗಾರಪ್ಪ ಕನ್ನಡ ಸೇರಿ ಪ್ರಥಮ ಭಾಷೆಗಳಿಗೆ ಅಂಕಗಳನ್ನು ಇಳಿಸುವ ನಿರ್ಧಾರ ಮಾಡಿರುವುದು ಖಂಡನೀಯ ಎಂದರು.
ಕನ್ನಡದ ಅಸ್ತಿತ್ವವನ್ನೇ ಪ್ರಶ್ನಿಸುವಂತಿರುವ ಈ ನಿರ್ಧಾರ ಕನ್ನಡ ಭಾಷೆಗೆ ದ್ರೋಹ ಬಗೆದಂತೆ ಎನ್ನುವುದನ್ನು ಸರ್ಕಾರ ಅರಿಯಬೇಕು. ನಮ್ಮ ಭಾಷೆ ಮತ್ತು ಅಸ್ತಿತ್ವಕ್ಕೆ ಧಕ್ಕೆ ತರುವ ಇಂತಹ ನಿರ್ಧಾರವನ್ನು ತೆಗೆದುಕೊಂಡಿರುವುದು ಕರ್ನಾಟಕ ಸರ್ಕಾರಕ್ಕೆ ಕನ್ನಡದ ಬಗೆಗಿರುವ ಪ್ರೀತಿಯನ್ನು ತೋರಿಸುತ್ತದೆ. ಇಂತಹ ಕನ್ನಡ ವಿರೋಧಿ ನಿರ್ಧಾರವನ್ನು ಕೂಡಲೇ ಸರ್ಕಾರ ವಾಪಸ್ ಪಡೆಯಬೇಕು ಎಂದು ಕೇಂದ್ರ ಸಚಿವ ವಿ. ಸೋಮಣ್ಣ ಆಗ್ರಹಿಸಿದ್ದಾರೆ.