ಬೆಂಗಳೂರು: ಕನ್ನಡದ ಹಿರಿಯ ನಟಿ ಬಿ. ಸರೋಜಾ ದೇವಿ ಅವರು ತನ್ನ ಕಣ್ಣುಗಳನ್ನು ದಾನ ಮಾಡಿ ಸಾವಿನಲ್ಲಿಯೂ ಸಾರ್ಥಕತೆ ಮೆರೆದಿದ್ದು, ಇನ್ನೊಬ್ಬರ ಬಾಳಿಗೆ ಬೆಳಕಾಗುವ ನಿಟ್ಟಿನಲ್ಲಿ ತನ್ನ ಕಣ್ಣುಗಳನ್ನು ದಾನ ಮಾಡಿದ್ದಾರೆ.
ನಟಿ ಬಿ.ಸರೋಜಾದೇವಿ ಅವರ ಕಣ್ಣುಗಳನ್ನು ಅವರ ಕುಟುಂಸ್ಥರು ಬೆಂಗಳೂರಿನ ನಾರಾಯಣ ನೇತ್ರಾಲಯಕ್ಕೆ ದಾನ ಮಾಡಿದ್ದರು. ಇದೀಗ ವೈದ್ಯರು ಬಂದು ನೇತ್ರದಾನ ಪ್ರಕ್ರಿಯೆಯನ್ನು ಪೂರ್ಣಗೊಳಿಸುತ್ತಿದ್ದಾರೆ.
ಈ ಕುರಿತು ನಾರಾಯಣ ನೇತ್ರಾಲಯ ಸಿಬ್ಬಂದಿ ಶೈಲಜಾ ಅವರು ಮಾತನಾಡಿದ್ದು, ಈ ಹಿಂದೆ ಕಣ್ಣು ದಾನದ ಬಗ್ಗೆ ನಟಿ ಮಾತಾನಾಡಿದ್ರು, ಆದರಂತೆ ಇಂದು ಅವರ ಕಣ್ಣು ದಾನ ಮಾಡಿದ್ದಾರೆ. ಹುಟ್ಟು ಕುರುಡರಿಗೆ ಕಾರ್ನಿಯ ಹಾಕುತ್ತೇವೆ ಎಂದು ಹೇಳಿದ್ದಾರೆ.