ಬೆಂಗಳೂರು: ನಗರದ ಕೆ.ಜಿ. ಹಳ್ಳಿ ಮತ್ತು ಡಿ.ಜಿ. ಹಳ್ಳಿ ಗಲಭೆ ಪ್ರಕರಣದಲ್ಲಿ ತಪ್ಪೊಪ್ಪಿಕೊಂಡ ಮೂವರು ಅಪರಾಧಿಗಳಿಗೆ ನಗರದ ಎನ್‌ಐಎ ವಿಶೇಷ ನ್ಯಾಯಾಲಯ 7 ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಸೈಯದ್ ಇಕ್ರಾಮುದ್ದೀನ್ (44), ಸೈಯ್ಯದ್ ಆಸೀಫ್ (46) ಹಾಗೂ ಮೊಹಮ್ಮದ್ ಅತಿಫ್ (26) ಜೈಲುಶಿಕ್ಷೆಗೊಳಗಾದವರು. ಈ ಮೂವರು ಅಪರಾಧಿಗಳಿಗೆ ಏಳು ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ ತಲಾ 36 ಸಾವಿರ ರೂ ದಂಡ ವಿಧಿಸಿ ನ್ಯಾಯಾಲಯ ಆದೇಶಿಸಿದೆ.
2020ರ ಅ.11ರಂದು ಕೆ.ಜಿ. ಹಳ್ಳಿ ಹಾಗೂ ಡಿ.ಜಿ. ಹಳ್ಳಿ ಪೊಲೀಸ್ ಠಾಣೆಗಳಿಗೆ ಬೆಂಕಿ ಹಚ್ಚಿ ಪೀಠೋಪಕರಣ ಧ್ವಂಸಗೊಳಿಸಿ ಗಲಭೆಗೆ ಒಳಸಂಚು ರೂಪಿಸಿದ್ದ ಆರೋಪದ ಮೇಲೆ ಹಲವರನ್ನು ಪೊಲೀಸರು ಬಂಧಿಸಿದ್ದರು. ಪ್ರಕರಣದ ತನಿಖೆ ನಡೆಸಿದ್ದ ರಾಷ್ಟ್ರೀಯ ತನಿಖಾದಳದ ಅಧಿಕಾರಿಗಳು ತನಿಖೆ ವೇಳೆ ಆರೋಪಿಗಳು ಒಳಸಂಚು ಮತ್ತು ಇನ್ನಿತರ
ಸಹಚರರೊಂದಿಗೆ ಸೇರಿ ಗಲಭೆಯಲ್ಲಿ ಭಾಗಿಯಾಗಿರುವುದು ತಿಳಿದು ಬಂದಿತ್ತು.