ನವದೆಹಲಿ: ದೇಶದ ಅತಿ ದೊಡ್ಡ ಐಟಿ ಸೇವಾ ಸಂಸ್ಥೆ ಟಾಟಾ ಕನ್ಸಲೆನ್ಸಿ ಸರ್ವೀಸಸ್ (TCS) ಮುಂದಿನ ಹಣಕಾಸು ವರ್ಷದ ವೇಳೆಗೆ ಬರೊಬ್ಬರಿ 12 ಸಾವಿರ ಮಂದಿ ಉದ್ಯೋಗಿಗಳನ್ನು ವಜಾ ಮಾಡಲು ಮುಂದಾಗಿದೆ ಎಂದು ಹೇಳಲಾಗುತ್ತಿದೆ.
ಮೂಲಗಳ ಪ್ರಕಾರ ಟಾಟಾ ಕನ್ಸಲೆನ್ಸಿ ಸರ್ವೀಸಸ್ (TCS), ತ್ವರಿತ ತಾಂತ್ರಿಕ ಬದಲಾವಣೆಗಳಿಗೆ ವಿಶೇಷವಾಗಿ ಕೃತಕ ಬುದ್ಧಿಮತ್ತೆಯಲ್ಲಿ ಹೊಂದಿಕೊಳ್ಳುವ ಯೋಜನೆಯ ಭಾಗವಾಗಿ, ತನ್ನ ಜಾಗತಿಕ ಉದ್ಯೋಗಿಗಳನ್ನು ಶೇಕಡಾ 2% ರಷ್ಟು ಅಂದರೆ ಸರಿ ಸುಮಾರು 12 ಸಾವಿರ ಮಂದಿಯನ್ನು ಕೆಲಸದಿಂದ ವಜಾ ಮಾಡಲು ನಿರ್ಧರಿಸಿದ್ದು ಉದ್ಯೋಗಿಗಳು ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.
ತಂತ್ರಜ್ಞಾನ ಉದ್ಯಮದಲ್ಲಿನ ರಚನಾತ್ಮಕ ಬದಲಾವಣೆಗಳ ನಡುವೆ ಸ್ಪರ್ಧಾತ್ಮಕವಾಗಿ ಉಳಿಯುವ ಅಗತ್ಯದಿಂದ ಈ ಕ್ರಮವನ್ನು ಕೈಗೊಳ್ಳಲಾಗುತ್ತಿದೆ. ನಾವು ಹೊಸ ತಂತ್ರಜ್ಞಾನಗಳನ್ನು ವಿಶೇಷವಾಗಿ AI ಮತ್ತು ಕಾರ್ಯಾಚರಣಾ ಮಾದರಿ ಬದಲಾವಣೆಗಳನ್ನು ಕರೆಯುತ್ತಿದ್ದೇವೆ. ಕೆಲಸ ಮಾಡುವ ವಿಧಾನಗಳು ಬದಲಾಗುತ್ತಿವೆ. ಭವಿಷ್ಯಕ್ಕಾಗಿ ನಮಗೆ ಅಗತ್ಯವಿರುವ ಕೌಶಲ್ಯಗಳನ್ನು ಮೌಲ್ಯಮಾಪನ ಮಾಡುತ್ತಿದ್ದೇವೆ ಎಂದು ಸಂಸ್ಥೆ ಹೇಳಿದೆ.