ಯಾದಗಿರಿ: ಪ್ರಕರಣವೊಂದರಲ್ಲಿ ಆರೋಪಿಗಳನ್ನು ಬಂಧಿಸಲು ದೂರುದಾರರಿಂದ ಹಣ ಸ್ವೀಕರಿಸಿದ ಆರೋಪಕ್ಕೆ ಸಂಬಂಧಿಸಿದಂತೆ, ಯಾದಗಿರಿ ತಾಲೂಕಿನ ಗುರುಮಠಕಲ್ ಪಟ್ಟಣದ ಪೊಲೀಸ್ ಠಾಣೆಯ ಇಬ್ಬರು ಕಾನ್ಸ್ ಟೇಬಲ್‌ಗಳನ್ನು ಎಸ್ಪಿ ಪೃಥ್ವಿಕ್ ಶಂಕರ್‌ಮಂಗಳವಾರ ಅಮಾನತುಗೊಳಿಸಿ ಆದೇಶಿಸಿದ್ದಾರೆ.
ಕಾನ್ಸ್‌ಟೇಬಲ್ ಗಳಾದ ವಿಶ್ವನಾಥರೆಡ್ಡಿ ಮತ್ತು ಗೋಪಾಲರೆಡ್ಡಿ ಅಮಾನತುಗೊಂಡವರು. ಇತ್ತೀಚೆಗೆ ಇವರಿಬ್ಬರು ಹಲ್ಲೆ ಕೇಸ್‌ವೊಂದರಲ್ಲಿ ಆರೋಪಿಗಳನ್ನು ಬಂಧಿಸಲು ದೂರುದಾರರಿಂದ ತಲಾ ₹10000 ಪೋನ್ ಪೇ ಮೂಲಕ ಪಡೆದಿದ್ದರು ಎಂದು ಆರೋಪಿಸಲಾಗಿತ್ತು.
ಈ ಸಂಬಂಧ ದೂರು ಬಂದ ಹಿನ್ನೆಲೆಯಲ್ಲಿ ಎಸ್ಪಿ ಅವರು ಡಿವೈಎಸ್ಪಿಗೆ ತನಿಖೆ ನಡೆಸಲು ಸೂಚಿಸಿದ್ದರು. ಡಿವೈಎಸ್ಪಿ ನೀಡಿದ ವರದಿ ಇಬ್ಬರು ಕಾನ್ಸ್‌ಟೇಬಲ್ ಗಳನ್ನು ಅಮಾನತು ಮಾಡಲಾಗಿದೆ.