ಭದ್ರಾವತಿ: ಪ್ರಿಯಕರನೊಂದಿಗೆ ಸೇರಿ ಪತಿ ಇಮ್ತಿಯಾಜ್‌ನನ್ನು ಕೊಲೆ ಮಾಡಿದ್ದ ಪತ್ನಿ ಲಕ್ಷ್ಮಿ ಮತ್ತು ಆಕೆಯ ಪ್ರಿಯಕರ ಕೃಷ್ಣಮೂರ್ತಿಗೆ ಮರಣದಂಡನೆ ಮತ್ತು ಪ್ರಕರಣದಲ್ಲಿ ಭಾಗಿಯಾಗಿದ್ದ ಶಿವರಾಜ್‌ಗೆ 7 ವರ್ಷ ಜೈಲು ಶಿಕ್ಷೆಯನ್ನು ವಿಧಿಸಿ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಶಿಕ್ಷೆಗೊಳಗಾದ ಲಕ್ಷ್ಮಿ ಮತ್ತು ಕೊಲೆಯಾದ ಇಮ್ತಿಯಾಜ್ ಇಬ್ಬರೂ ಶಿಕ್ಷಕರಾಗಿದ್ದು, ಪ್ರೀತಿಸಿ ಮದುವೆಯಾಗಿದ್ದರು. ಲಕ್ಷ್ಮಿ ಭದ್ರಾವತಿಯ ಅಂತರಗಂಗೆ ಶಾಲೆಯಲ್ಲಿ ನೌಕರಿಯಲ್ಲಿದ್ದರೆ ಇಮ್ತಿಯಾಜ್ ಸೊರಬದಲ್ಲಿ ಶಿಕ್ಷಕರಾಗಿದ್ದರು. ಜನ್ನಾಪುರದಲ್ಲಿ ಮನೆ ಮಾಡಿಕೊಂಡಿದ್ದರು. ಪತಿ ಇಮ್ತಿಯಾಜ್ ಆಗಾಗ್ಗೆ ಬಂದು ಹೋಗುತ್ತಿದ್ದರು.
ಕೃಷ್ಣಮೂರ್ತಿ ಎಂಬಾತನೊಂದಿಗೆ ಲಕ್ಷ್ಮಿ ಅಕ್ರಮ ಸಂಬಂಧ ವಿಟ್ಟುಕೊಂಡಿದ್ದಳು. ರಂಜಾನ್ ಹಬ್ಬಕ್ಕೆ ಲಕ್ಷ್ಮಿಯನ್ನು ಊರಿಗೆ ಕರೆದುಕೊಂಡು ಹೋಗಲು ಪತಿ ಇಮ್ತಿಯಾಜ್ 2016ರ ಜುಲೈ 7ರಂದು ಭದ್ರಾವತಿಗೆ ಬಂದಿದ್ದರು. ಈ ವೇಳೆ ಪತ್ನಿ ಲಕ್ಷ್ಮಿ,ಪ್ರಿಯಕರ ಕೃಷ್ಣಮೂರ್ತಿ ಹಾಗೂ ವೇದರಾಜ್ ನಿಮ್ತಿಯಾಜ್ ತಲೆಗೆ ಕಬ್ಬಿಣದ ಪೈಪ್‌ನಿಂದ ಹೊಡೆದು ಕೊಲೆ ಮಾಡಿದ್ದರು. ನಂತರ ಮೃತ ದೇಹವನ್ನು ಬಟ್ಟೆಯಲ್ಲಿ ಸುತ್ತಿ ಭದ್ರಾ ನದಿಗೆ ಎಸೆದಿದ್ದರು. ಈ ಬಗ್ಗೆ ಇಮ್ಮಿಯಾಜ್ ಸೋದರ ನ್ಯೂಟೌನ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಗಳ ವಿರುದ್ಧ ಚಾಜ್೯ಶೀಟ್ ಸಲ್ಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು.