ಸುದ್ದಿ

ವಿಚ್ಛೇದನ ಪ್ರಕರಣ: ₹12 ಕೋಟಿ ರು.ಜೀವನಾಂಶ ಕೇಳಿದ ಐಟಿ ಉದ್ಯೋಗಿಗೆ ಸುಪ್ರೀಂಕೋರ್ಟ್ ತರಾಟೆ

Share It

ನವದೆಹಲಿ: ಮದುವೆಯಾಗಿ ಒಂದುವರೆ ವರ್ಷದಲ್ಲೇ ವಿಚ್ಛೇದನ ಪಡೆದಿದ್ದ ಮಹಿಳೆ ಪತಿಯಿಂದ ₹12 ಕೋಟಿ ಹಣ, ಕಾರು,ಮನೆಯನ್ನು ಜೀವನಾಂಶವಾಗಿ ಕೇಳಿದ್ದಕ್ಕೆ ಖಾರವಾಗಿ ಪ್ರತಿಕ್ರಿಯಿಸಿರುವ ಸುಪ್ರೀಂಕೋರ್ಟ್ ಬೆಂಗಳೂರಿನ ಐಟಿ ಕಂಪನಿಯಲ್ಲಿ ಕೆಲಸಕ್ಕೆ ಸೇರುವಂತೆ ಸಲಹೆ ನೀಡಿದೆ.

ಈ ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡ ನ್ಯಾ| ಗವಾಯಿ ಅವರು ‘ನೀವು ಎಂಬಿಎ ಪದವೀಧರೆ ಮತ್ತು ಅನುಭವಿ ಐಟಿ ಉದ್ಯೋಗಿ. ಹೀಗಿರುವಾಗ ಹಣವನ್ನು ನೀವೇ ಸಂಪಾದಿಸಬೇಕೇ ಹೊರತು, ಇನ್ನೊಬ್ಬರ ಹಣ ಕೇಳಬಾರದು. 18 ತಿಂಗಳು ದಾಂಪತ್ಯ ಮಾಡಿದ್ದಕ್ಕೆ ಪ್ರತಿಯಾಗಿ ನಿಮಗೆ ಪ್ರತಿ ತಿಂಗಳು 1 ಕೋಟಿ ರು. ಕೊಡಬೇಕೇ’ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲದೆ ಬೆಂಗಳೂರಲ್ಲಿ ಐಟಿ ಕೆಲಸಕ್ಕೆ ಸೇರುವಂತೆ ಸಲಹೆ ನೀಡಿದ್ದಾರೆ.

ಕೇವಲ ಒಂದೂವರೆ ವರ್ಷದ ದಾಂಪತ್ಯದ ಬಳಿಕ ವಿಚ್ಛೇದನ ಪಡೆದಿದ್ದ ಮಹಿಳೆಯೊಬ್ಬರು, ಪತಿಯಿಂದ 12 ಕೋಟಿ ರು. ಜೀವನಾಂಶ, ಮುಂಬೈನಲ್ಲೊಂದು ಮನೆ ಮತ್ತು ಬಿಎಂಡಬ್ಲ್ಯು ಕಾರ್‌ಗೆ ಬೇಡಿಕೆ ಇಟ್ಟಿದ್ದರು.
ಜೊತೆಗೆ ಮಹಿಳೆಯ ಹೆಸರಲ್ಲಿ ಮುಂಬೈನಲ್ಲಿ ಫ್ಲ್ಯಾಟ್ ಇರುವುದನ್ನು ಗಮನಿಸಿದ ನ್ಯಾಯಾಲಯ ಆ ಮನೆ ಇಟ್ಟುಕೊಂಡು ಸುಮ್ಮನಿದ್ದುಬಿಡಿ. ಬೆಂಗಳೂರಿಗೆ ಹೋಗಿ ಕೆಲಸ ಮಾಡಿ ಎಂದು ಸಲಹೆ ನೀಡಿದೆ.


Share It

You cannot copy content of this page