ಬೆಂಗಳೂರು: ರಾಜಧಾನಿ ಬೆಂಗಳೂರಲ್ಲಿ ಡಗ್ಸ್ ಮಾಫಿಯಾ ಮಿತಿಮೀರಿದ್ದು ಆತಂಕಕ್ಕೆ ಕಾರಣವಾಗಿದೆ. ಇದರ ನಡುವೆ ಪೊಲೀಸರೇ ಡ್ರಗ್ಸ್ ಮಾರಾಟ
ದಂಧೆಕೋರರೊಂದಿಗೆ ನೇರವಾಗಿ ಶಾಮೀಲಾಗಿರುವ ಗಂಭೀರ ಆರೋಪ ಪ್ರಕರಣ ಬಯಲಿಗೆ ಬಂದಿದೆ.
ಡ್ರಗ್ಸ್ ಮಾರಾಟ ಜಾಲದ ಜತೆ ಕೈ ಜೋಡಿಸಿದ್ದ ಜಗಜೀವನ್ ರಾಂ ನಗರ ಹಾಗೂ ಚಾಮರಾಜಪೇಟೆ ಠಾಣೆಯ ಇನ್ಸ್‌ಪೆಕ್ಟರ್ ಸೇರಿ 11 ಮಂದಿ ಪೊಲೀಸರನ್ನು ಅಮಾನತುಗೊಳಿಸಿ ನಗರ ಪೊಲೀಸ್ ಆಯುಕ್ತರು ಆದೇಶಿಸಿದ್ದಾರೆ.
ಅಮಾನತುಗೊಂಡ 11 ಮಂದಿ ಪೊಲೀಸರು ಡ್ರಗ್ ಪೆಡ್ಲರ್ ಗಳ ಜೊತೆ ನಿರಂತರವಾಗಿ ಸಂಪರ್ಕದಲ್ಲಿದ್ದರು ಎಂಬ ಆರೋಪವಿದ್ದು, ಪೆಡ್ಲರ್ ಗಳಿಂದ ಪ್ರತಿ ತಿಂಗಳು ಲಕ್ಷಾಂತರ ರೂ. ಲಂಚ ಪಡೆಯುತ್ತಿದ್ದರು. ಜತೆಗೆ, ಪೆಡ್ಲರ್ ಗಳು ನಡೆಸುವ ಮಾದಕ ಅಂಶವಿರುವ ಡ್ರಗ್ಸ್ ಮಾತ್ರೆಗಳ ಮಾರಾಟಕ್ಕೆ ರಕ್ಷಕರಾಗಿದ್ದರು ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.