ಕಾನೂನು

ಮರಣದಂಡನೆ ಅರ್ಜಿಗಳು ಬಾಕಿ: 2 ವಾರದಲ್ಲಿ ವಿವರ ನೀಡಿ: ಸುಪ್ರೀಂಕೋರ್ಟ್

Share It

ನವದೆಹಲಿ: ಮರಣ ದಂಡನೆ ಅರ್ಜಿಗಳು ಬಾಕಿ ಇರುವ ಬಗ್ಗೆ ವಿವರಗಳನ್ನು ನೀಡಲು ವಿಫಲವಾಗಿದ್ದಕ್ಕೆ ಕರ್ನಾಟಕ ಹೈಕೋರ್ಟ್ ಅನ್ನು ತರಾಟೆಗೆ ತೆಗೆದುಕೊಂಡಿರುವ ಸುಪ್ರೀಂಕೋರ್ಟ್ ಈ ಸಂಬಂಧ ಎರಡು ವಾರಗಳಲ್ಲಿ ರಿಜಿಸ್ಟ್ರಾರ್ ಜನರಲ್ ವಿವರ ನೀಡಬೇಕು ಎಂದು ನಿರ್ದೇಶನ ನೀಡಿದೆ.

ಪ್ರಕರಣವೊಂದರ ವಿಚಾರಣೆ ವೇಳೆ, ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದೀವಾಲಾ ಹಾಗೂ ಪಂಕಜ್ ಮಿತ್ತಲ್ ಅವರ ಪೀಠವು ದೇಶದಾದ್ಯಂತ ಬಾಕಿ ಇರುವ ಮರಣದಂಡನೆ ಅರ್ಜಿಗಳ ಕುರಿತು ದತ್ತಾಂಶದ ವಿವರಗಳನ್ನು ನೀಡುವಂತೆ ಕೋರಿತು.

ಎಲ್ಲ ಹೈಕೋರ್ಟ್‌ಗಳು ಅಗತ್ಯವಾದ ದತ್ತಾಂಶ ಒದಗಿಸಲು ವಿಫಲವಾಗಿವೆ.ಅಗತ್ಯ ಮಾಹಿತಿ ಒದಗಿಸಲು ಏಕೆ ವಿಫಲರಾಗಿದ್ದಾರೆ ಎಂಬುದನ್ನು ಹೈಕೋರ್ಟ್‌ನ ರಿಜಿಸ್ಟ್ರಾ‌ರ್ ಜನರಲ್ ವಿವರಿಸಬೇಕಾಗಿದೆ. ಈ ನಿಟ್ಟಿನಲ್ಲಿ ವಿವರಣೆ ನೀಡಲು ರಿಜಿಸ್ಟ್ರಾರ್ ಜನರಲ್‌ಗೆ ಎರಡು ವಾರಗಳ ಕಾಲಾವಕಾಶ ನೀಡಲಾಗಿದೆ’ ಎಂದು ಪೀಠ ಹೇಳಿತು.


Share It

You cannot copy content of this page