ಸುದ್ದಿ

ಐಎಸ್‌ಎಮ್‌ಇ ಕಾಲೇಜಿನಲ್ಲಿ ೭೦ನೇ ಕನ್ನಡ ರಾಜ್ಯೋತ್ಸವ ಆಚರಣೆ

Share It

ಬೆಂಗಳೂರು: ನಗರದ ಐಎಸ್‌ಎಮ್‌ಇ ಕಾಲೇಜಿನಲ್ಲಿ ೭೦ನೇ ಕನ್ನಡ ರಾಜ್ಯೋತ್ಸವವನ್ನು ನವೆಂಬರ್ 7, 2025 ರಂದು ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು.

ಐಎಸ್‌ಎಮ್‌ಇ ಕಾಲೇಜಿನ ನವತಾರ ಸಭಾಂಗಣದಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಮುಖ್ಯ ಅತಿಥಿ ಡಾ. ರಮೇಶ್ ಎಚ್. ಕಿತ್ತೂರು, ಎನ್‌ಎಸ್‌ಎಸ್ ಸಂಯೋಜಕರು, ಬೆಂಗಳೂರು ವಿಶ್ವವಿದ್ಯಾಲಯ ಇವರು ದೀಪ ಬೆಳಗುವ ಮೂಲಕ ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಡಾ. ರಮೇಶ್ ಎಚ್. ಕಿತ್ತೂರು, ಎನ್‌ಎಸ್‌ಎಸ್ ಸಂಯೋಜಕರು, ಬೆಂಗಳೂರು ವಿಶ್ವವಿದ್ಯಾಲಯ ಮತ್ತು ಪ್ರೊ. ವಿಜಯ್ ಕುಮಾರ್, ಕನ್ನಡ ವಿಭಾಗದ ಮುಖ್ಯಸ್ಥರು, ಐಎಸ್‌ಬಿಆರ್ ಕಾಲೇಜು, ಎಲೆಕ್ಟ್ರಾನಿಕ್ ಸಿಟಿ, ಬೆಂಗಳೂರು ಉಪಸ್ಥಿತರಿದ್ದರು. ಅತಿಥಿಗಳು ಕನ್ನಡ ಭಾಷೆ, ಸಂಸ್ಕೃತಿ ಹಾಗೂ ಯುವಕರ ಪಾತ್ರದ ಕುರಿತಾಗಿ ಪ್ರೇರಣಾದಾಯಕ ಮಾತುಗಳನ್ನು ಹಂಚಿಕೊಂಡರು.

ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ನಾಡು-ನುಡಿ, ಜನಪದ, ಸಂಸ್ಕೃತಿ, ಪರಂಪರೆಯನ್ನು ಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಡೊಳ್ಳು ಕುಣಿತ ಕಾರ್ಯಕ್ರಮದ ಆಕರ್ಷಣೆಯಾಗಿತ್ತು. ವಿದ್ಯಾರ್ಥಿಗಳು ಕೆಂಪು, ಹಳದಿ ಬಣ್ಣದ ಉಡುಪು ಧರಿಸಿ ಕನ್ನಡತನ ಮೆರೆದರು. ನಾಡಗೀತೆಯೊಂದಿಗೆ ಆರಂಭವಾದ ಕಾರ್ಯಕ್ರಮ ರಾಷ್ಟ್ರಗೀತೆಯೊಂದಿಗೆ ಮುಕ್ತಾಯವಾಯಿತು.

ಡಾ. ನಿತಿನ್ ಗರ್ಗ್, ನಿರ್ದೇಶಕರು, ಐಎಸ್‌ಎಮ್‌ಇ.
ಡಾ. ರೋನಿ ಜಿ. ಕುರಿಯನ್ – ಡೀನ್, ಐಎಸ್‌ಎಮ್‌ಇ. ಪ್ರೊ. ಶಶಿರೇಖಾ ಬಿ.ವಿ. – ಉಪಪ್ರಾಂಶುಪಾಲರು, ಯುಜಿ ಐಎಸ್‌ಎಮ್‌ಇ.
ಡಾ. ಶಂಪಾ ನಂದಿ – ಪಿಜಿ ಪ್ರಾಂಶುಪಾಲರು, ಐಎಸ್‌ಎಮ್‌ಇ. ವೇಣು ಎನ್. ಗೌಡ ಹಾಗೂ ಪ್ರೊ. ಸಿ.ಪಿ. ರಮೇಶ್ ಐಎಸ್‌ಎಮ್‌ಇ ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.


Share It

You cannot copy content of this page