ಕಾನೂನು

ಉದ್ಯೋಗದಲ್ಲಿರುವ ಮಹಿಳೆಗೆ ಪತಿ ಜೀವನಾಂಶ ನೀಡುವ ಅಗತ್ಯವಿಲ್ಲ: ಹೈಕೋರ್ಟ್

Share It

ವಿಚ್ಛೇದಿತ ಮಹಿಳೆಯು ದುಡಿಯುವ ಸಾಮರ್ಥ್ಯ ಹೊಂದಿದ್ದು, ಜೀವನ ನಡೆಸಲು ಸಮರ್ಥಳಾಗಿದ್ದರೆ ಪತಿಯಿಂದ ಜೀವನಾಂಶ ಪಡೆಯುವಂತಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ತೀರ್ಪು ನೀಡಿದೆ.

ಅಂಕಿತ್ ಸಾಹಾ ಎಂಬ ವ್ಯಕ್ತಿ ಪತ್ನಿಗೆ ವಿಚ್ಚೇದನ ನೀಡಿದ್ದರು. ಆಕೆ ಸ್ನಾತಕೋತ್ತರ ಪದವೀಧರಳಾಗಿದ್ದು, ಉದ್ಯೋಗಕ್ಕೆ ಸೇರಿ ಸಂಬಳ ಪಡೆಯುತ್ತಿದ್ದರೂ ಜೀವನಾಂಶಕ್ಕೆ ಬೇಡಿಕೆಯಿಟ್ಟಿದ್ದಳು. ಇದರ ವಿಚಾರಣೆ ನಡೆಸಿದ ಕೌಟುಂಬಿಕ ಕೋರ್ಟ್, ಪತಿ ಜೀವನಾಂಶ ಕೊಡಬೇಕು ಎಂದು ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಪತಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಕೆಳ ಕೋರ್ಟ್‌ನ ತೀರ್ಪನ್ನು ಟೀಕಿಸಿರುವ ಹೈಕೋರ್ಟ್ ದುಡಿಯುತ್ತಿರುವ ಪತ್ನಿಗೆ ಜೀವನಾಂಶ ಕೊಡುವಂತಿಲ್ಲ ಎಂದು ಹೇಳಿದೆ.

ವಿಚ್ಛೇದಿತ ಮಹಿಳೆ ತಿಂಗಳಿಗೆ ಉದ್ಯೋಗದಲ್ಲಿದ್ದು 36,000 ರು. ಗಳಿಸುತ್ತಿದ್ದಾಳೆ. ಆಕೆಗೆ ಬೇರೆ ಯಾವುದೇ ಹೊಣೆಗಾರಿಕೆ ಇಲ್ಲ. ಆದರೆ ಪುರುಷ ತನ್ನ ವಯಸ್ಸಾದ ಹೆತ್ತವರನ್ನು ನೋಡಿಕೊಳ್ಳುವ ಜವಾಬ್ದಾರಿ ಹೊಂದಿರುತ್ತಾನೆ. ಹಾಗಾಗಿ ಆತ ಜೀವನಾಂಶ ನೀಡುವ ಅಗತ್ಯವಿಲ್ಲ’ ಎಂದು ತೀರ್ಪು ನೀಡಿದೆ.


Share It

You cannot copy content of this page