ಸುದ್ದಿ

ಕೊಲೆ ಅಪರಾಧಿಗೆ 10 ವರ್ಷ ಶಿಕ್ಷೆ ವಿಧಿಸಿದ ಕೋಟ್೯

Share It

ರಾಮನಗರ: ಹತ್ತು ವರ್ಷಗಳ ಹಿಂದೆ ಚನ್ನಪಟ್ಟಣದ ಡಿಎಆರ್‌ಮೈದಾನದಲ್ಲಿ ಹಳೇ ದ್ವೇಷ ಮತ್ತು ಹಣ ಕಾಸಿನ ವಿಚಾರಕ್ಕೆ ನಡೆದಿದ್ದ ವ್ಯಕ್ತಿಯೊಬ್ಬರ ಕೊಲೆ ಪ್ರಕರಣದ ಅಪರಾಧಿಗೆ ಇಲ್ಲಿನ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಲಯ ಹತ್ತು ವರ್ಷ ಕಾರಾಗೃಹ ಶಿಕ್ಷೆ ಮತ್ತು 1.05 ಲಕ್ಷ ದಂಡ ವಿಧಿಸಿ ತೀರ್ಪು ನೀಡಿದೆ.

ಪ್ರಕಾಶ್ ಅಲಿಯಾಸ್ ಜಾನಿ (43) ಶಿಕ್ಷೆಗೊಳಗಾದ ಅಪರಾಧಿ. ಎಚ್.ಸಿ. ಪ್ರಕಾಶ(46) ಕೊಲೆಯಾದವರು. ಜಾನಿ ಮತ್ತು ಕೊಲೆಯಾದ ಪ್ರಕಾಶ್ ನಡುವೆ ಹಣಕಾಸಿನ ವಿಚಾರವಾಗಿ ಜಗಳ ನಡೆದಿತ್ತು. ಇದೇ ವಿಷಯಕ್ಕೆ ದ್ವೇಷ ಸಾಧಿಸುತ್ತಿದ್ದ ಜಾನಿ, 2015ರ ಫೆ. 22ರಂದು ಪ್ರಕಾಶ ಅವರು ಡಿಎಆರ್ ಮೈದಾನದಲ್ಲಿ ವಾಕಿಂಗ್ ಮುಗಿಸಿಕೊಂಡು ಮನೆಗೆ ಹೋಗುವಾಗ ಎದುರಿಗೆ ಬಂದು ಜಗಳ ತೆಗೆದಿದ್ದ. ಆಗ ಜಾನಿ, ಪ್ರಕಾಶ ಅವರ ಮರ್ಮಾಂಗಕ್ಕೆ ಒದ್ದು, ಕಪಾಳಕ್ಕೆ ಹೊಡೆದು ಕೊಲೆ ಮಾಡಿ ಪರಾರಿಯಾಗಿದ್ದ.


Share It

You cannot copy content of this page